ಕರ್ನಾಟಕ

karnataka

ETV Bharat / state

ತುಮಕೂರು: 272 ಮಂದಿಗೆ ಕೊರೊನಾ ಸೋಂಕು - ಇಂದು 250 ಮಂದಿ ಗುಣಮುಖ - ತುಮಕೂರಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ

ಕಲ್ಪತರು ನಾಡು ತುಮಕೂರಿನಲ್ಲಿ ಇಂದು ಹೊಸದಾಗಿ 272 ಮಂದಿಗೆ ಕೋವಿಡ್​​-19 ಸೋಂಕು ತಗುಲಿದ್ದು, ಜಿಲ್ಲೆಯಲ್ಲಿ ಇಂದು ಒಂದೇ ದಿನ ಸುಮಾರು 250 ಮಂದಿ ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ.

kovid updates from tumkur
ಮಂದಿ ಗುಣಮುಖ

By

Published : Sep 22, 2020, 11:28 PM IST

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಇಂದು 272 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 11387ಕ್ಕೆ ಏರಿಕೆಯಾಗಿದೆ.

ಇವತ್ತು ತುಮಕೂರು ತಾಲೂಕಿನಲ್ಲಿ 82 ಮಂದಿಗೆ ಸೋಂಕು ತಗುಲಿದ್ದರೆ ಮಧುಗಿರಿ ತಾಲೂಕಿನಲ್ಲಿ 32 ಮಂದಿಗೆ ಗುಬ್ಬಿ ಮತ್ತು ತಿಪಟೂರು ತಾಲೂಕಿನಲ್ಲಿ ತಲಾ 31 ಮಂದಿಗೆ, ತುರುವೇಕೆರೆ ತಾಲೂಕಿನಲ್ಲಿ 22 ಮಂದಿಗೆ , ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 26, ಪಾವಗಡ ತಾಲೂಕಿನಲ್ಲಿ 20 , ಕುಣಿಗಲ್ ಮತ್ತು ಕೊರಟಗೆರೆ ತಾಲೂಕಿನಲ್ಲಿ ತಲಾ 10 ಮಂದಿಗೆ, ಶಿರಾ ತಾಲೂಕಿನಲ್ಲಿ 8 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಇಂದು 250 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಇದುವರೆಗೂ ಒಟ್ಟು 9074 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇನ್ನು 2052 ಮಂದಿ ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 6 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್​​ಗೆ ಬಲಿಯಾದವರ ಸಂಖ್ಯೆ 212 ಕ್ಕೆ ಏರಿಕೆಯಾಗಿದೆ.

ABOUT THE AUTHOR

...view details