ತುಮಕೂರು: ಜಿಲ್ಲೆಯಲ್ಲಿ 187 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 18194 ಕ್ಕೆ ಏರಿಕೆಯಾಗಿದೆ.
ತುಮಕೂರು ಜಿಲ್ಲೆಯಲ್ಲಿ ಇಂದು 187 ಮಂದಿಗೆ ಕೊರೊನಾ ಸೋಂಕು - ಕೊರೊನಾ ಪ್ರಕರಣ ಏರಿಕೆ ನ್ಯೂಸ್
ಇಂದು ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ 187 ಮಂದಿಯಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಮೂವರು ಸೋಂಕಿತರು ಸಾವನ್ನಪ್ಪಿದ್ದಾರೆ.
ತುಮಕೂರು ತಾಲೂಕಿನಲ್ಲಿ ಈ ದಿನ 67 ಮಂದಿಗೆ ಸೋಂಕು ತಗುಲಿದ್ದರೆ, ಶಿರಾ ತಾಲೂಕಿನಲ್ಲಿ 30, ಕೊರಟಗೆರೆ ತಾಲೂಕಿನಲ್ಲಿ 16, ತುರುವೇಕೆರೆ ತಾಲೂಕಿನಲ್ಲಿ 15, ಕುಣಿಗಲ್ ತಾಲೂಕಿನಲ್ಲಿ 14, ಗುಬ್ಬಿ ತಾಲೂಕಿನಲ್ಲಿ 13, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 10, ಮಧುಗಿರಿ ತಾಲೂಕಿನಲ್ಲಿ 9, ಪಾವಗಡ ತಾಲೂಕಿನಲ್ಲಿ 6, ಹಾಗೂ ತಿಪಟೂರಿನಲ್ಲಿ ಏಳು ಮಂದಿಗೆ ಸೋಂಕು ತಗುಲಿದೆ.
ಇಂದು 278 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ . ಈವರೆಗೆ ಒಟ್ಟು 15,734 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇನ್ನು 2078 ಮಂದಿ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಮೂವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, ಇದುವರೆಗೂ ಮೃತರ ಸಂಖ್ಯೆ 247 ಕ್ಕೆ ಏರಿಕೆಯಾಗಿದೆ