ತುಮಕೂರು:ಜಿಲ್ಲಾಸ್ಪತ್ರೆಯಲ್ಲಿ ಇಂದು ನೂತನ ಕೋವಿಡ್-19 ಟೆಸ್ಟಿಂಗ್ ಲ್ಯಾಬೋರೇಟರಿ (ಆರ್ಟಿಪಿಸಿಆರ್ ಲ್ಯಾಬ್)ಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಉದ್ಘಾಟಿಸಿದರು.
ಕೋವಿಡ್-19 ಟೆಸ್ಟಿಂಗ್ ಲ್ಯಾಬ್ಗೆ ಜೆ.ಸಿ. ಮಾಧುಸ್ವಾಮಿ ಚಾಲನೆ - J.C. Madhuswami
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಇಂದು ಕೋವಿಡ್-19 ಟೆಸ್ಟಿಂಗ್ ಲ್ಯಾಬೋರೇಟರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಉದ್ಘಾಟಿಸಿದರು.
ಕೋವಿಡ್-19 ಟೆಸ್ಟಿಂಗ್ ಲ್ಯಾಬ್ಗೆ ಚಾಲನೆ
ಪ್ರತಿದಿನ 280 ಟೆಸ್ಟ್ಗಳನ್ನು ಮಾಡುವ ಸೌಲಭ್ಯವಿದ್ದು, ಸದ್ಯಕ್ಕೆ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುವುದು. ಈ ಪ್ರಯೋಗಾಲಯದಲ್ಲಿ ಚಿಕೂನ್ ಗುನ್ಯಾ, ಹೆಚ್1ಎನ್1, ಡೆಂಘಿ ಟೆಸ್ಟ್ಗಳು ಸೇರಿದಂತೆ ವೈರಸ್ಗೆ ಸಂಬಂಧಿಸಿದ ರೋಗಗಳ ಪರೀಕ್ಷೆ ನಡೆಸಲಾಗುವುದು.
ಈ ಹಿಂದೆ ಕೋವಿಡ್ ಪರೀಕ್ಷೆಗಳನ್ನು ನಡೆಸಲು ಬೆಂಗಳೂರು, ಹಾಸನಕ್ಕೆ ಮಾದರಿಗಳನ್ನು ಕಳುಹಿಸಬೇಕಾಗಿತ್ತು. ಇದೀಗ ಜಿಲ್ಲಾಸ್ಪತ್ರೆಯಲ್ಲಿ ಆರ್ಟಿಪಿಸಿಆರ್ ಲ್ಯಾಬ್ ಆರಂಭಿಸುವುದರಿಂದ ಕೋವಿಡ್ ಪರೀಕ್ಷೆಗಳನ್ನು ಮಾಡಲು ಅನುಕೂಲವಾಗಲಿದೆ.