ತುಮಕೂರು:ಪ್ರಜ್ವಲ್ ರೇವಣ್ಣ ಇರುವಂತಹ ಸತ್ಯವನ್ನು ಹೇಳುತ್ತಾರೆ, ಜೆಡಿಎಸ್ ಪಕ್ಷದಲ್ಲಿ ಸೂಟ್ ಕೇಸ್ ಕೊಡುವವರಿಗೆ ಮುಂದೆ ಕೂರಿಸುತ್ತಾರೆ ಇನ್ನುಳಿದವರು ಹಿಂದೆ ಇರುತ್ತಾರೆ ಎಂದು ಲೋಕಸಭಾ ಚುನಾವಣೆಗೂ ಮುನ್ನವೇ ಅವರು ಹೇಳಿಕೆಯೊಂದನ್ನು ನೀಡಿದ್ದರು. ಅವರ ಈ ಹೇಳಿಕೆ ಸತ್ಯ ಎಂದು ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ಪ್ರಜ್ವಲ್ ರೇವಣ್ಣ ನೇರ ನುಡಿ-ನಡೆಗೆ ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ಮೆಚ್ಚುಗೆ - ಜ್ವಲ್ ರೇವಣ್ಣ ನೇರ ನುಡಿ-ನಡೆಗೆ ಕೆ.ಎನ್.ರಾಜಣ್ಣ ಮೆಚ್ಚುಗೆ
ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅವರ ನೇರ ನಡೆ, ನುಡಿಗೆ ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದು, ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ಕಾರಣಕ್ಕೆ ನಾನು ಪ್ರಜ್ವಲ್ ರೇವಣ್ಣ ಅವರನ್ನು ಇಷ್ಟಪಡುತ್ತೇನೆ. ವಾಸ್ತವಾಂಶವನ್ನು ಹೇಳುವವರು ರಾಜಕೀಯದಲ್ಲಿ ಕಡಿಮೆ, ಆದರೆ ಪ್ರಜ್ವಲ್ ರೇವಣ್ಣ ತಮ್ಮ ಕುಟುಂಬದಲ್ಲಿ ಇರುವಂತಹ ರಾಜಕಾರಣವನ್ನು ಸಮೀಪದಿಂದ ನೋಡಿರುತ್ತಾರೆ. ಅಲ್ಲದೆ ಅದನ್ನು ನೇರವಾಗಿ ಹೇಳಿರುವುದು ಕಂಡುಬರುತ್ತದೆ ಎಂದಿದ್ದಾರೆ.
ಪ್ರಜ್ವಲ್ ಹೇಳಿರುವುದು ಸುಳ್ಳಾಗಿದ್ದಿದ್ದರೆ, ಜೆಡಿಎಸ್ ಪಕ್ಷದ ಮುಖಂಡರು ಅದು ಸುಳ್ಳು ಎಂಬ ಹೇಳಿಕೆಯನ್ನು ನೀಡಬೇಕಿತ್ತು. ಅವರು ಯಾರು ಕೂಡ ಪ್ರಜ್ವಲ್ ರೇವಣ್ಣ ಅವರ ಹೇಳಿಕೆಗೆ ಪ್ರತಿಹೇಳಿಕೆ ನೀಡಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.