ಕರ್ನಾಟಕ

karnataka

ETV Bharat / state

ಮಾಜಿ ಪ್ರಧಾನಿಗೆ ಸವಾಲೆಸೆದ ಮಾಜಿ ಶಾಸಕ ಕೆ.ಎನ್.ರಾಜಣ್ಣ: ಯಾಕೆ ಗೊತ್ತೇ? - tumkur Rajanna statement against devegowda

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮೂಗರ್ಜಿ ಗಿರಾಕಿ. ಡಿಕೆ ಶಿವಕುಮಾರ್ ವಿರುದ್ಧ ಮೊದಲಿನಿಂದಲೂ ಸಾಕಷ್ಟು ಮೂಗರ್ಜಿಗಳನ್ನು ಬರೆದಿದ್ದಾರೆ. ಅವೆಲ್ಲವುಗಳನ್ನು ಅಧಿಕಾರಿಗಳು ಒಟ್ಟುಗೂಡಿಸಿ ಇಟ್ಟುಕೊಂಡಿದ್ದರು. ಬೇಕಾದರೆ ಯಾವುದಾದರೂ ದೇವಸ್ಥಾನಕ್ಕೆ ಬಂದು ದೇವೇಗೌಡರು ನಾನು ಯಾರಿಗೂ ಮೂಗರ್ಜಿ ಬರೆದಿಲ್ಲ ಎಂದು ಹೇಳಲಿ ನೋಡೋಣ ಎಂದು ಮಾಜಿ ಶಾಸಕ ಕೆ.ಎನ್. ರಾಜಣ್ಣ ಸವಾಲು ಹಾಕಿದ್ದಾರೆ.

ಕೆ. ಎನ್ ರಾಜಣ್ಣ

By

Published : Nov 5, 2019, 2:43 PM IST

Updated : Nov 5, 2019, 3:34 PM IST

ತುಮಕೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮೂಗರ್ಜಿ ಗಿರಾಕಿ. ಡಿ.ಕೆ.ಶಿವಕುಮಾರ್ ವಿರುದ್ಧ ಮೊದಲಿನಿಂದಲೂ ಸಾಕಷ್ಟು ಮೂಗರ್ಜಿಗಳನ್ನು ಬರೆದಿದ್ದಾರೆ. ಅವೆಲ್ಲವುಗಳನ್ನು ಅಧಿಕಾರಿಗಳು ಒಟ್ಟುಗೂಡಿಸಿ ಇಟ್ಟುಕೊಂಡಿದ್ದರು. ಬೇಕಾದರೆ ಯಾವುದಾದರೂ ದೇವಸ್ಥಾನಕ್ಕೆ ಬಂದು ದೇವೇಗೌಡರು ನಾನು ಯಾರಿಗೂ ಮೂಗರ್ಜಿ ಬರೆದಿಲ್ಲ ಎಂದು ಹೇಳಲಿ ನೋಡೋಣ ಎಂದು ಮಾಜಿ ಶಾಸಕ ಕೆ. ಎನ್. ರಾಜಣ್ಣ ಸವಾಲು ಹಾಕಿದ್ದಾರೆ.

ಕೆ. ಎನ್. ರಾಜಣ್ಣ

ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಡಿ.ಕೆ. ಶಿವಕುಮಾರ್ ನಡುವಿನ ಆರೋಪ ಪ್ರತ್ಯಾರೋಪಗಳನ್ನು ನಾವು ಕಂಡಿದ್ದೇವೆ. ಅದನ್ನು ಯಾರೂ ಮುಚ್ಚಿಡಲು ಆಗುವುದಿಲ್ಲ ಎಂದರು. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನ ದೇವೇಗೌಡರು ಮತ್ತು ಡಿ.ಕೆ. ಶಿವಕುಮಾರ್ ಬದ್ಧ ವೈರಿಗಳಾಗಿದ್ದರು ಎಂದರು.

ಎಚ್. ಡಿ. ಕುಮಾರಸ್ವಾಮಿ ವಚನಭ್ರಷ್ಟ ಎಂಬುದು ಈಗಾಗಲೇ ಸಾಬೀತಾಗಿದೆ. ಮಾಜಿ ಪ್ರಧಾನಿ ಕುಟುಂಬದವರು ಎಂಬ ನೆರಳಿನಡಿ ಕೆಲವೊಂದು ಸಣ್ಣಪುಟ್ಟ ತಪ್ಪುಗಳಿದ್ದರೂ ಮುಚ್ಚಿಹೋಗುತ್ತಿವೆ. ಫೋನ್ ಕದ್ದಾಲಿಕೆ ಪ್ರಕರಣಗಳು ಎಲ್ಲ ಮುಖ್ಯಮಂತ್ರಿಗಳ ಸರ್ಕಾರದಲ್ಲೂ ನಡೆಯುತ್ತವೆ. ಫೋನ್ ಕದ್ದಾಲಿಕೆ ಮಾಡುವಂತೆ ಸೂಚನೆ ನೀಡಿದಂತಹ ಯಾವುದೇ ದಾಖಲೆಗಳು ಇರುವುದಿಲ್ಲ. ಆದರೆ ಈ ವ್ಯವಸ್ಥೆಯಲ್ಲಿ ಕೆಲಸ ಮಾಡಿರುವ ಪೊಲೀಸ್ ಅಧಿಕಾರಿಗಳು ಸಿಕ್ಕಿ ಬೀಳುತ್ತಾರೆ ಎಂದು ತಿಳಿಸಿದರು.

Last Updated : Nov 5, 2019, 3:34 PM IST

ABOUT THE AUTHOR

...view details