ಕರ್ನಾಟಕ

karnataka

ETV Bharat / state

ಅಂಗನವಾಡಿ ಸಹಾಯಕಿಯ ಕತ್ತು ಕೊಯ್ದು ಬರ್ಬರ ಹತ್ಯೆ - ತುಮಕೂರು ಅಪರಾಧ ಸುದ್ದಿ

ಅಂಗನವಾಡಿ ಕಟ್ಟಡದ ಹಿಂಭಾಗದಲ್ಲಿ ಈ ಘಟನೆ ನಡೆದಿದೆ. ಅಲ್ಲಿ ವಾಸವಿರುವ ಮನೆಯ ಓರ್ವ ಮಹಿಳೆ ಈ ದೃಶ್ಯ ನೀಡಿದ್ದಾರೆ. ಅಷ್ಟೇ ಅಲ್ಲದೆ ಆಕೆಯನ್ನು ಕೊಲೆ ಮಾಡುವಾಗ ಸಾರ್ವಜನಿಕರೂ ಸಹ ಘಟನೆಯನ್ನು ನೋಡಿದ್ದಾರೆ..

Killed anganwadi activist in tumkur
ಅಂಗನವಾಡಿ ಸಹಾಯಕಿಯ ಕತ್ತು ಕೊಯ್ದು ಬರ್ಬರ ಹತ್ಯೆ

By

Published : Nov 14, 2021, 5:01 PM IST

ತುಮಕೂರು: ಅಂಗನವಾಡಿ ಸಹಾಯಕಿಯನ್ನು ಕತ್ತು ಕೊಯ್ದು ಬರ್ಬರವಾಗಿ ಹತ್ಯೆಮಾಡಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ ಹಾಲ್ಕುರಿಕೆ ಗ್ರಾಮ(Halkure village)ದಲ್ಲಿ ಜರುಗಿದೆ.

ಅಂಗನವಾಡಿ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಭಾರತಿ (Anganwadi activist Bharati ) (30) ಕೊಲೆಯಾದವರು. ಈಕೆಯ ಪತಿ ನಾಗರಾಜ ಈ ಹಿಂದೆಯೇ ಮೃತಪಟ್ಟಿದ್ದಾರೆ. ನಾಗರಾಜ ಅವರ ಅಕ್ಕನ ಮಗ ದಿವಾಕರ ಈ ಕೊಲೆಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಅಂಗನವಾಡಿ ಕಟ್ಟಡದ ಹಿಂಭಾಗದಲ್ಲಿ ಈ ಘಟನೆ ನಡೆದಿದೆ. ಅಲ್ಲಿ ವಾಸವಿರುವ ಮನೆಯ ಓರ್ವ ಮಹಿಳೆ ಈ ದೃಶ್ಯ ನೀಡಿದ್ದಾರೆ. ಅಷ್ಟೇ ಅಲ್ಲದೆ ಆಕೆಯನ್ನು ಕೊಲೆ ಮಾಡುವಾಗ ಸಾರ್ವಜನಿಕರೂ ಸಹ ಘಟನೆಯನ್ನು ನೋಡಿದ್ದಾರೆ.

ಅವರೂ ಆಕೆಯನ್ನು ಕಾಪಾಡಲು ಹೋದಾಗ ಆರೋಪಿ ಅವರಿಗೆ ಬೆದರಿಕೆ ಹಾಕಿದ್ದಾನಂತೆ. ಈ ಸಂಬಂಧ ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಘಟನೆ ನಡೆದ ಸ್ಥಳಕ್ಕೆ ಹೊನ್ನವಳ್ಳಿ ಪೊಲೀಸರು (Honnavalli police)ತೆರಳಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details