ಕರ್ನಾಟಕ

karnataka

ETV Bharat / state

ತುಮಕೂರು: 35 ವರ್ಷಗಳ ನಂತರ ಕೋಡಿ ಬಿದ್ದ ಕೆರೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಗ್ರಾಮಸ್ಥರು - Etv Bharat Kannada

35 ವರ್ಷಗಳ ಬಳಿಕ ಕೆಸ್ತೂರು ಕೆರೆ ಕೋಡಿ ಬಿದ್ದ ಹಿನ್ನೆಲೆ ಗ್ರಾಮಸ್ಥರು ಕೆರೆಗೆ ವಿದ್ಯುತ್​ ದೀಪಾಲಂಕಾರ ಮಾಡಿ ಸಂಭ್ರಮಿಸಿದ್ದಾರೆ.

Kn_tmk_01_cele
35 ವರ್ಷಗಳ ನಂತರ ಕೋಡಿ ಬಿದ್ದ ಕೆರೆ

By

Published : Oct 17, 2022, 2:08 PM IST

ತುಮಕೂರು:35ವರ್ಷಗಳ ಬಳಿಕ ತುಮಕೂರು ತಾಲೂಕಿನ ಕೆಸ್ತೂರು ಗ್ರಾಮದ ಕೆರೆಯೊಂದು ಕೋಡಿ ಬಿದ್ದ ಹಿನ್ನೆಲೆ ಗ್ರಾಮಸ್ಥರು ಸಂಭ್ರಮಿಸಿದ್ದಾರೆ.

ನಿರಂತರ ಸುರಿದ ಮಳೆಯಿಂದಾಗಿ ಕೆಸ್ತೂರು ಕೆರೆ 35 ವರ್ಷಗಳ ಬಳಿಕ ಕೋಡಿಬಿದ್ದಿದೆ. ಗ್ರಾಮದ ನೇತಾಜಿ ಬ್ರಿಗೇಡ್​ನಿಂದ ಕೋಡಿ ಬಿದ್ದ ಕೆರೆಗೆ ಬಣ್ಣ ಬಣ್ಣದ ವಿದ್ಯುತ್​ಗಳಿಂದ ದೀಪಾಲಂಕಾರ ಮಾಡಲಾಗಿದೆ. ಬಳಿಕ ಕೆರೆಯ ಮುಂದೆ ಪಟಾಕಿಗಳನ್ನು ಸಿಡಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

35 ವರ್ಷಗಳ ನಂತರ ಕೋಡಿ ಬಿದ್ದ ಕೆರೆ

ಕಳೆದ 35 ವರ್ಷಗಳಿಂದ ಕೆರೆ ಒಮ್ಮೆಯೂ ಭರ್ತಿಯಾಗಿ ಕೋಡಿ ಒಡೆದಿರಲಿಲ್ಲ. ಇದೀಗ ಜಿಲ್ಲೆಯಲ್ಲಿ ನಿರಂತರ ಮಳೆಯಾದ ಹಿನ್ನೆಲೆ ಕೆರೆಕೋಡಿ ಬಿದ್ದಿದೆ.

ಇದನ್ನೂ ಓದಿ:42 ವರ್ಷಗಳ ನಂತರ ಕೋಡಿ ಬಿದ್ದ ಕೆರೆ.. ಮಳೆಯಲ್ಲೇ ನೀರಿಗಿಳಿದು ಗ್ರಾಮಸ್ಥರಿಂದ ಡ್ಯಾನ್ಸ್ - VIDEO

ABOUT THE AUTHOR

...view details