ತುಮಕೂರು: ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಘಟಿಕೋತ್ಸವದಲ್ಲಿ ವೈದ್ಯಕೀಯ ಪದವಿ ಪ್ರಮಾಣ ಪತ್ರ ಸ್ವೀಕರಿಸಿದ್ದ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬರು ಹಾವು ಕಡಿತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಕೇರಳ ಮೂಲದ ಅದಿತ್ ಬಾಲಕೃಷ್ಣನ್ ಮೃತರು.
ಬುಧವಾರ ಪಾರ್ಕಿನಲ್ಲಿ ಹಾವು ಕಡಿದಿರುವ ಶಂಕೆ ವ್ಯಕ್ತವಾಗಿದ್ದು, ಹಾವು ಕಡಿತ ಗಮನಿಸದೇ ಮನೆಗೆ ಬಂದಾಗ ಅದಿತ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮೃತದೇಹವನ್ನು ಸಿದ್ಧಾರ್ಥ ವೈದ್ಯಕೀಯ ಕಾಲೇಜಿಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಹಾವು ಕಚ್ಚಿ ಸಾವನ್ನಪ್ಪಿದ್ದ ಯುವ ರೈತ; ಹಾವಿನ ಜತೆ ಕೀಟಲೇ ಮಾಡಿದ್ದಕ್ಕೇ ಸೇಡು ತೀರಿಸಿಕೊಂಡಿತೇ ನಾಗಪ್ಪ?
ಹಾವು ಕಚ್ಚಿ ಯುವ ರೈತ ಸಾವು( ಹಾಸನ):ಇತ್ತೀಚಿಗೆ, ಜಮೀನಿನಲ್ಲಿ ಹಾವು ಕಚ್ಚಿ ಯುವ ರೈತ ಸಾವನ್ನಪ್ಪಿದ್ದ ಘಟನೆ ಹಾಸನದ ಹೊಳೆನರಸೀಪುರದಲ್ಲಿ ನಡೆದಿತ್ತು. ದೇವರಗುಡ್ಡೇನಹಳ್ಳಿ ಗ್ರಾಮದ ನಿವಾಸಿ ಅಭಿಲಾಷ್ (27) ಮೃತರು. ರಾತ್ರಿ ಅಭಿಲಾಷ್ ಬೆಳೆಗೆ ನೀರು ಹಾಯಿಸಲು ಜಮೀನಿಗೆ ತೆರಳಿದ್ದರು. ತೆಂಗಿನ ಸಸಿಗಳಿಗೆ ನೀರುಣಿಸಲು ಮುಂದಾದಾಗ, ಗೊತ್ತಿಲ್ಲದೇ ಹಾವವನ್ನು ತುಳಿದಿದ್ದರು. ಪರಿಣಾಮ ವಿಷಪೂರಿತ ಹಾವು ಕಚ್ಚಿತ್ತು. ತಕ್ಷಣ ಹೊಳೆನರಸೀಪುರ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅಭಿಲಾಷ್ ಮೃತಪಟ್ಟಿದ್ದರು. ತೋಟಗಾರಿಕೆ ಮತ್ತು ಜಾನುವಾರು ಸಾಕಣೆಯಲ್ಲಿ ಅಭಿಲಾಷ್ ತೊಡಗಿದ್ದು, ಹೊಳೆನರಸೀಪುರದಲ್ಲಿ ಯುವ ರೈತ ಪ್ರಶಸ್ತಿಗೆ ಭಾಜನರಾಗಿದ್ದರು. ಹಳ್ಳಿ ಮೈಸೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.