ಕರ್ನಾಟಕ

karnataka

ETV Bharat / state

ಕಣ್ವ ಫ್ಯಾಶನ್ ಲಿಮಿಟೆಡ್​ನಿಂದ ಅನ್ಯಾಯ: ಕಾರ್ಮಿಕರ ಪ್ರತಿಭಟನೆ - ತುಮಕೂರು ಸುದ್ದಿ

ಕಣ್ವ ಫ್ಯಾಶನ್ ಲಿಮಿಟೆಡ್​​​ನ ಸುಮಾರು 300 ಜನ ಕಾರ್ಮಿಕರಿಗೆ ಕಾನೂನು ಬದ್ಧವಾಗಿ ನೀಡಬೇಕಿರುವ ಸಂಬಳ, ಗಳಿಕೆ ರಜೆ ನಗದಿಕರಣ, ಪಿಎಫ್ ಹಣವನ್ನು ಒದಗಿಸಿ, ನಮಗೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕೆಂದು ಕಣ್ವ ಕಾರ್ಮಿಕರ ಹೋರಾಟ ಸಮಿತಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

kanva workers Protest
ಕಣ್ವ ಫ್ಯಾಶನ್ ಲಿಮಿಟೆಡ್​ನಿಂದ ಅನ್ಯಾಯ : ಕಾರ್ಮಿಕರ ಪ್ರತಿಭಟನೆ

By

Published : Sep 16, 2020, 5:11 PM IST

Updated : Sep 16, 2020, 6:32 PM IST

ತುಮಕೂರು: ಕಣ್ವ ಫ್ಯಾಶನ್ ಲಿಮಿಟೆಡ್​​​ನ ಸುಮಾರು 300 ಜನ ಕಾರ್ಮಿಕರಿಗೆ ಕಾನೂನು ಬದ್ಧವಾಗಿ ನೀಡಬೇಕಿರುವ ಸಂಬಳ, ಗಳಿಕೆ ರಜೆ ನಗದಿಕರಣ, ಪಿಎಫ್ ಹಣವನ್ನು ಒದಗಿಸಿ, ಅನ್ಯಾಯವನ್ನು ತಡೆಯಬೇಕೆಂದು ಕಣ್ವ ಕಾರ್ಮಿಕರ ಹೋರಾಟ ಸಮಿತಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

ಕಣ್ವ ಫ್ಯಾಶನ್ ಲಿಮಿಟೆಡ್​ನಿಂದ ಅನ್ಯಾಯ: ಕಾರ್ಮಿಕರ ಪ್ರತಿಭಟನೆ

ಕಳೆದ ವರ್ಷ ಸೆಪ್ಟಂಬರ್ 18ರಂದು ಯಾವುದೇ ರೀತಿಯ ಸೂಚನೆಯನ್ನು ನೀಡದೆ ಕೊರಟಗೆರೆ ತಾಲೂಕಿನ ಕೊಂಗೇನಹಳ್ಳಿ ಬಳಿ ಇರುವ ಕಣ್ವ ಫ್ಯಾಶನ್ಸ್​​ನ ಆಡಳಿತ ಮಂಡಳಿಯು ಘಟಕವನ್ನು ಮುಚ್ಚಿತು. ಅಲ್ಲದೇ ಕಾನೂನು ಬಾಹಿರವಾಗಿ ಕಾರ್ಮಿಕರನ್ನು ಕೆಲಸದಿಂದ ಹೊರಹಾಕಲಾಗಿದೆ.

ಸಂಬಳ, ಪಿಎಫ್, ಇಎಸ್ಐ ಮುಂತಾದ ಸೌಲಭ್ಯಗಳಿಗೆ ಕಂಪನಿಯು ಸಹಕಾರ ನೀಡದೆ, ಕಾರ್ಮಿಕರಿಗೆ ನೀಡಬೇಕಿದ್ದ ಹಣವನ್ನು ನೀಡದೆ ವಂಚನೆ ಮಾಡಿದೆ. ಈಗಲಾದರೂ ಜಿಲ್ಲಾಡಳಿತ ನೊಂದ ಕಾರ್ಮಿಕರಿಗೆ ನ್ಯಾಯ ದೊರಕಿಸುವ ಕಾರ್ಯ ಮಾಡಬೇಕಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

Last Updated : Sep 16, 2020, 6:32 PM IST

ABOUT THE AUTHOR

...view details