ತುಮಕೂರು:ಇಂದು ಏಕಕಾಲದಲ್ಲಿ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದ್ದ ನಾಡಗೀತೆ ಗಾಯನ ಕಾರ್ಯಕ್ರಮದಲ್ಲಿ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸಾವಿರಾರು ಮಕ್ಕಳು ಭಾಗವಹಿಸಿದ್ದರು. ಮಠದ ಸಾವಿರಾರು ಮಕ್ಕಳು ಗೀತಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬಳಿಕ ಮಾತನಾಡಿದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಪ್ರಾದೇಶಿಕತೆ ಉಳಿಸಿಕೊಂಡು ರಾಷ್ಟ್ರಿಯತೆ ಬೆಳೆಸುವ ಕಾರ್ಯವಾಗಬೇಕಿದೆ. ಆಡಳಿತದಲ್ಲಿ ಕನ್ನಡವಾಗಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಕುವೆಂಪು ಹೇಳಿದಂತೆ ಎಲ್ಲಾದರೂ ಇರು ಎಂಥಾದರೂ ಇರು ಎಂದೆಂದಿಗೂ ನಿ ಕನ್ನಡವಾಗಿರು ಎನ್ನುವಂತೆ ನಾವು ಎಲ್ಲಿಯೇ ಇದ್ದರೆ ಕನ್ನಡತನ ಉಳಿಸಿಕೊಳ್ಳಬೇಕು. ಬೇರೆ ಭಾಷೆ ಕಲಿಯಬಾರದು ಅಂತೇನೂ ಇಲ್ಲ ಎಲ್ಲಾ ಭಾಷೆ ಕಲಿಯೋಣ ಆದರೆ ಕನ್ನಡ ಭಾಷೆಯಲ್ಲಿ ಜೀವಿಸೋಣ ಎಂದರು.