ತುಮಕೂರು: ನಾನು ಗೆದ್ದರೆ ಜನ ಸೇವೆ ಮಾಡುತ್ತೇನೆ, ಸೋತರೆ ಅಕ್ರಮ ಬಯಲಿಗೆಳೆಯುತ್ತೇನೆ ಎಂದು ಕಲ್ಕೆರೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಗಂಗಮ್ಮ ಹೇಳಿದರು.
ಗೆದ್ದರೆ ಜನಸೇವೆ, ಸೋತರೆ ಅಕ್ರಮ ಬಯಲಿಗೆಳೆಯುವೆ: ಗ್ರಾ.ಪಂ ಅಭ್ಯರ್ಥಿ ಗಂಗಮ್ಮ - Kalkare Grama Panchayat candidate Gangamma campaign
ಮನೆ ಮನೆಗೆ ತೆರಳಿ ವಿಭಿನ್ನವಾದ ಕರಪತ್ರವನ್ನು ಕೊಟ್ಟು ಮತಯಾಚನೆ ಮಾಡುತ್ತಿದ್ದೇನೆ. ಮತದಾರರು ನನಗೆ ಮತ ಹಾಕುವುದಾಗಿ ಭರವಸೆ ನೀಡಿದ್ದಾರೆ ಎಂದು ಕಲ್ಕೆರೆ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವ ಗಂಗಮ್ಮ ತಿಳಿಸಿದ್ದಾರೆ.

ಗಂಗಮ್ಮ
ಗ್ರಾ.ಪಂ. ಅಭ್ಯರ್ಥಿಯಿಂದ ವಿನೂತನ ಪ್ರಚಾರ
ಈ ಹಿಂದೆ ಒಮ್ಮೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋಲು ಕಂಡಿದ್ದೇನೆ. ಈ ಬಾರಿ ವಿಭಿನ್ನವಾಗಿ ಕರಪತ್ರವನ್ನು ಮುದ್ರಿಸಿ ಜನರ ಬಳಿ ಮತ ಯಾಚಿಸುತ್ತಿದ್ದೇನೆ ಎಂದು ಅವರು ಹೇಳಿದರು.
ಓದಿ:ಮಹಾರಾಷ್ಟ್ರದಂತೆ ರಾಜ್ಯದ ಲಿಂಗಾಯತರಿಗೂ ಶೇ.16 ರಷ್ಟು ಮೀಸಲಾತಿ ನೀಡಿ: ವಚನಾನಂದ ಶ್ರೀ