ತುಮಕೂರು:ಕೊರೊನಾ ಸೋಂಕಿನಿಂದ ಜಿಲ್ಲೆಯಲ್ಲಿ ಪತ್ರಕರ್ತರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಕೊರೊನಾ ಸೋಂಕಿಗೆ ತುಮಕೂರಲ್ಲಿ ಪತ್ರಕರ್ತ ಬಲಿ - Tumkur corona latest news
ಕೊರೊನಾ ಸೋಂಕಿಗೆ ತುಮಕೂರು ಜಿಲ್ಲೆಯಲ್ಲಿ ಪತ್ರಕರ್ತ ಸಾವನ್ನಪ್ಪಿದ್ದಾರೆ. ಇವರು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗುತ್ತಿದೆ.
![ಕೊರೊನಾ ಸೋಂಕಿಗೆ ತುಮಕೂರಲ್ಲಿ ಪತ್ರಕರ್ತ ಬಲಿ Journalist died by corona](https://etvbharatimages.akamaized.net/etvbharat/prod-images/768-512-03:38:59:1597486139-kn-tmk-06-journalistdied-script-7202233-15082020153516-1508f-1597485916-850.jpg)
Journalist died by corona
ಸುಮಾರು 38 ವರ್ಷದ ಜಯಣ್ಣ ಎಂಬುವವರು ಅನೇಕ ದಿನಗಳಿಂದ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದು, ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇವರು ಗುಬ್ಬಿ ತಾಲೂಕಿನ ಪ್ರಜಾವಾಣಿ ಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು.