ಕರ್ನಾಟಕ

karnataka

ETV Bharat / state

ತುಮಕೂರು ಜಿಲ್ಲಾ ಪಂಚಾಯತ್ ನೇಮಕಾತಿ; ತಾಂತ್ರಿಕ ಸಹಾಯಕರ ಹುದ್ದೆಗಳಿಗೆ ಅರ್ಜಿ ಆಹ್ವಾನ - ತುಮಕೂರು ಜಿಲ್ಲಾ ಪಂಚಾಯನ್​ನಲ್ಲಿದೆ ಉದ್ಯೋಗ

Jobs in Tumkur Zilla panchayat: ತುಮಕೂರು ಜಿಲ್ಲಾ ಪಂಚಾಯತ್​ ವ್ಯಾಪ್ತಿಯಲ್ಲಿ ಕೆಲಸ ಮಾಡಲಿಚ್ಛಿಸುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

Job notification From tumkur ZP office
Job notification From tumkur ZP office

By ETV Bharat Karnataka Team

Published : Nov 28, 2023, 1:03 PM IST

ಬೆಂಗಳೂರು: ತುಮಕೂರು ಜಿಲ್ಲಾ ಪಂಚಾಯತ್​ ವ್ಯಾಪ್ತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು 27 ತಾಂತ್ರಿಕ ಸಹಾಯಕರ ಹುದ್ದೆಗಳಿವೆ.

ಅಧಿಸೂಚನೆ
  • ತಾಲ್ಲೂಕು ಎಂಐಎಸ್​ ಸಂಯೋಜಕರು- 1
  • ತಾಂತ್ರಿಕ ಸಹಾಯಕ ಇಂಜಿನಿಯರ್​​ (ಸಿವಿಲ್​)- 6
  • ತಾಂತ್ರಿಕ ಸಹಾಯಕರು(ಕೃಷಿ)- 10
  • ತಾಂತ್ರಿಕ ಸಹಾಯಕರು(ತೋಟಗಾರಿಕೆ)- 3
  • ತಾಂತ್ರಿಕ ಸಹಾಯಕರು(ಅರಣ್ಯ)- 4
  • ತಾಂತ್ರಿಕ ಸಹಾಯಕರು(ರೇಷ್ಮೆ)- 3

ವಿದ್ಯಾರ್ಹತೆ: ಹುದ್ದೆಗನುಸಾರವಾಗಿ ಬಿಇ ಕಂಪ್ಯೂಟರ್​ ಸೈನ್ಸ್​, ಸಿವಿಲ್​ನಲ್ಲಿ ಬಿಇ ಪದವಿ , ಬಿಎಸ್ಸಿ ಕೃಷಿ, ಬಿಎಸ್ಸಿ ತೋಟಗಾರಿಕೆ, ಬಿಎಸ್ಸಿ ಅರಣ್ಯ, ಬಿಎಸ್ಸಿ ರೇಷ್ಮೆಗಾರಿಕೆಯಲ್ಲಿ ಪದವಿ.

ವಯೋಮಿತಿ: ಜಿಲ್ಲಾ ಪಂಚಾಯತ್​ ನಿಯಮದ ಅನುಸಾರ ವಯೋಮಿತಿ ನಿಗದಿ.

ವೇತನ:ಮಾಸಿಕ 28 ಸಾವಿರ ರೂ ಮತ್ತು ₹2,000 ಪ್ರಯಾಣ ಭತ್ಯೆ.

ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ನವೆಂಬರ್​ 20ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಡಿಸೆಂಬರ್​ 4 ಕಡೆಯ ದಿನ.

ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ತುಮಕೂರು ಜಿಲ್ಲಾಡಳಿತದ ಅಧಿಕೃತ ಜಾಲತಾಣ zptumakuru.karnataka.gov.in ಇಲ್ಲಿಗೆ ಭೇಟಿ ನೀಡಬಹುದು.

ದಾವಣಗೆರೆಯಲ್ಲಿ ಗುಮಾಸ್ತ ಹುದ್ದೆ:ದಾವಣಗೆರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಆಡಳಿತ ಸಹಾಯಕ/ಗುಮಾಸ್ತ -1, ಸ್ವಾಗತಕಾರರು-ಡಾಟಾ ಎಂಟ್ರಿ ಆಪರೇಟರ್​ -1, ಜವಾನ- 1 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕ ಅವಧಿಗೆ ನೇಮಕಾತಿ ನಡೆಯಲಿದೆ.

ವಿದ್ಯಾರ್ಹತೆ: ಪದವಿ ಹೊಂದಿರಬೇಕು. ನವೆಂಬರ್​ 20ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಡಿಸೆಂಬರ್​ 8 ಕಡೇಯ ದಿನ. ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು davanagere.dcourts.gov.in ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: ಸಿಬ್ಬಂದಿ ನೇಮಕಾತಿ ಆಯೋಗದಿಂದ 26,146 ಕಾನ್ಸ್​ಟೆಬಲ್‌ಗಳ ನೇಮಕಾತಿ: ಆಸಕ್ತರಿಗೆ ಅವಕಾಶ

ABOUT THE AUTHOR

...view details