ಕರ್ನಾಟಕ

karnataka

ETV Bharat / state

ಬಹುಮತ ಪಡೆದು ಜೆಡಿಎಸ್ ಅಧಿಕಾರಕ್ಕೆ ಬರಲಿದೆ: ಹೆಚ್‌.ಡಿ ಕುಮಾರಸ್ವಾಮಿ

ಮೊದಲ ಪಟ್ಟಿ ಬದಲಾಗಲಿದೆ ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆ ವಿಚಾರದಲ್ಲಿ ಸಂಭವನೀಯ ಅಭ್ಯರ್ಥಿಗಳು ಜನರ ಬಳಿ ಹೋಗಿ ವಿಶ್ವಾಸ ಗಳಿಸುತ್ತಾರೋ ಅಂತ ಹೆಸರು ಘೋಷಿಸಿದ್ದೇವೆ. ಜನತೆಯ ಅಲೆ ನೋಡಿ ಮೈ ಮರೆತರೆ ಅಭ್ಯರ್ಥಿ ಬದಲಾಗಬಹುದು. ಕಾರ್ಯಕರ್ತರ ಜತೆಗೆ ವಿಶ್ವಾಸ ಇರದಿದ್ದಾಗ ಅಭ್ಯರ್ಥಿ ಬದಲಾಗಲಿದ್ದಾರೆ. ಪ್ರತಿ ತಿಂಗಳ ಎಲ್ಲ ಕ್ಷೇತ್ರದ ವರದಿ‌ ಬರಲಿದೆ ಎಂದು ಕುಮಾರಸ್ವಾಮಿ ಪ್ರತಿಕ್ರಿಯೆ

Kumaraswamy spoke at the Tumkur Pancharatna Yatra
ತುಮಕೂರ ಪಂಚರತ್ನ ಯಾತ್ರೆಯಲ್ಲಿ ಕುಮಾರಸ್ವಾಮಿ ಮಾತನಾಡಿದರು

By

Published : Dec 2, 2022, 1:49 PM IST

Updated : Dec 2, 2022, 3:08 PM IST

ತುಮಕೂರು:ನಾವು ಮನೆಯಲ್ಲಿ‌ ಕೂತ್ಕಂಡ್ರೂ 50 ಸೀಟ್ ಬರುತ್ತೆ. ಜೆಡಿಎಸ್‌ಗೆ ಬೇಕಾಗಿರೋದು ಫುಲ್ ಮೆಜಾರಿಟಿ. ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಬೇಕೆನ್ನುವುದು ಆಶಯ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. ನಮ್ಮ ವಿರುದ್ಧ ಮಾತನಾಡಲು ಕಾಂಗ್ರೆಸ್‌ಗೆ ಬೇರೇನೂ ಇಲ್ಲ ಅನಿಸುತ್ತಿದೆ. ಜೆಡಿಎಸ್ ಬಿಜೆಪಿಯ ಬಿ ಟೀಮ್ ಎಂದು ಹೇಳುತ್ತಾ ಅವರು 70 ಸ್ಥಾನಕ್ಕೆ‌ ಬಂದಿದ್ದಾರೆ ಎಂದು ಲೇವಡಿ ಮಾಡಿದರು.

ಹಣ ಕೊಟ್ಟು ಕರೆದುಕೊಂಡು ಬಂದಿಲ್ಲ: ಮಹಿಳೆಯರು ರಾತ್ರಿ 11, 12 ಗಂಟೆಯಾದ್ರೂ ನಮ್ಮ ಸಭೆಗೆ ಬರುತ್ತಿದ್ದಾರೆ. ಇದನ್ನೆಲ್ಲಾ ನೋಡಿದ್ರೆ ಜೆಡಿಎಸ್ ಮೇಲೆ ಹೆಚ್ಚಿನ ಜವಾಬ್ದಾರಿ ವಹಿಸುತ್ತಿದ್ದಾರೆ. ಒಂದು ಬಾರಿ ಪಕ್ಷಕ್ಕೆ ಸಂಪೂರ್ಣ ಆಶೀರ್ವಾದ ಮಾಡಿ ಎಂದು ಜನತೆ ಮುಂದೆ ಹೇಳಿದ್ದೇನೆ. ಮುಂದಿನ ಮಾರ್ಚ್ ವರೆಗೂ ಯಾತ್ರೆಗೆ ಚಾಲನೆ ನೀಡಿದ್ದೇನೆ ಎಂದು ತಿಳಿಸಿದರು.

ಜನತೆ ವಿಶ್ವಾಸವಿಟ್ಟಿರುವ ಅಭ್ಯರ್ಥಿಗೆ ಟಿಕೆಟ್: ಪ್ರತಿದಿನ ನಾವೆಲ್ಲ 18 ರಿಂದ 20 ಗಂಟೆ ಕೆಲಸ ಮಾಡುತ್ತಿರುವುದು ದೇವರ ಆಶೀರ್ವಾದ. ಮೊದಲ ಪಟ್ಟಿ ಬದಲಾಗಲಿದೆ ಎಂಬ ದೇವೇಗೌಡರ ಹೇಳಿಕೆ ವಿಚಾರಕ್ಕೆ, ಸಂಭವನೀಯ ಅಭ್ಯರ್ಥಿಗಳು ಜನರ ಬಳಿ ಹೋಗಿ ವಿಶ್ವಾಸ ಗಳಿಸುತ್ತಾರೋ ಅಂತ ಹೆಸರನ್ನು ಘೋಷಿಸಿದ್ದೇವೆ. ಜನತೆಯ ಅಲೆ ನೋಡಿ ಮೈ ಮರೆತರೆ ಅಭ್ಯರ್ಥಿ ಬದಲಾಗಬಹುದು. ಕಾರ್ಯಕರ್ತರ ಜತೆಗೆ ವಿಶ್ವಾಸ ಇರದಿದ್ದಾಗ ಅಭ್ಯರ್ಥಿ ಬದಲಾಗಲಿದ್ದಾರೆ. ಪ್ರತಿ ತಿಂಗಳು ಎಲ್ಲ ಕ್ಷೇತ್ರದ ವರದಿ‌ ಬರಲಿದೆ. 130 ಕ್ಷೇತ್ರಗಳ ಅಭ್ಯರ್ಥಿಗಳ‌ ಪಟ್ಟಿಯಿದೆ. ಅವರಿಗೆಲ್ಲ ಕಾರ್ಯಾಗಾರ ಮೂಲಕ ತರಬೇತಿಯೂ ಮಾಡಿದ್ದೇನೆ ಎಂದರು.

ಇದನ್ನೂಓದಿ:ರಾಜ್ಯದ 224 ಕ್ಷೇತ್ರಗಳಲ್ಲೂ ಸ್ಪರ್ಧೆ: ಹೆಚ್ ​ಡಿ ದೇವೇಗೌಡ

Last Updated : Dec 2, 2022, 3:08 PM IST

ABOUT THE AUTHOR

...view details