ಕರ್ನಾಟಕ

karnataka

ETV Bharat / state

ನಾ ದೇವೇಗೌಡರನ್ನ ಸೋಲಿಸಲು ಯತ್ನಿಸಿದೆ ಅಂತೀಯಾ, ಕುಮಾರಸ್ವಾಮಿ ಹೊಟ್ಟೆಗೆ ಏನ್‌ ತಿಂತೀಯಾ.. ಗುಬ್ಬಿ ಶಾಸಕ ಶ್ರೀನಿವಾಸ್ ವಾಗ್ದಾಳಿ - ಹೆಚ್​ಡಿಕೆ ವಿರುದ್ಧ ಜೆಡಿಎಸ್ ಶಾಸಕ ಶ್ರೀನಿವಾಸ್ ಏಕವಚನದಲ್ಲಿಯೇ ವಾಗ್ದಾಳಿ

ನನಗೆ ಯಾರೂ ದಿಕ್ಕಿಲ್ಲ ಕಾಂಗ್ರೆಸ್​​ನವರೇ ಈಗ ನನಗೆ ದಿಕ್ಕು. ಸಿದ್ದರಾಮಣ್ಣ ಜೊತೆಲಿ ಕರಕೊಂಡು ಹೋದರೆ ಅವರ ಜೊತೆ ಹೋಗ್ತೇನೆ. ಸಿದ್ದರಾಮಣ್ಣ ಬರ್ತಾರೆ ಅಂತಾ ನಾನು ಬಂದಿದ್ದು. ಇದು ರಾಜಕೀಯ ಸಭೆಯಲ್ಲ. ಸಿದ್ದರಾಮಣ್ಣ ಕೆಲವು ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ ಅದಕ್ಕೆ ಬಂದಿದ್ದು ಎಂದರು ಶ್ರೀನಿವಾಸ್ ಗುಡಿಗಿದರು..

MLA Srinivas Statement in tumkur
ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಮತ್ತೆ ವಾಗ್ದಾಳಿ

By

Published : Nov 1, 2021, 7:09 PM IST

ತುಮಕೂರು : ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಗುಬ್ಬಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಲ್ಲಿಗೆ ಬಂದು ಮೊಸಳೆ ಕಣ್ಣೀರು ಹಾಕುತ್ತಾರೆ. ಗ್ಲಿಸರಿನ್ ಹಾಕಿಕೊಂಡು ಕಣ್ಣೀರು ಹಾಕುತ್ತಾರೆ. ಇವರು ಎಂಥಾ ಮನುಷ್ಯರು ಎಂದು ಏಕವಚನದಲ್ಲಿಯೇ ಹೆಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಮತ್ತೆ ವಾಗ್ದಾಳಿ

ದೇವೇಗೌಡರನ್ನು ಸೋಲಿಸುವ ಯತ್ನ ಮಾಡಿದ್ದೇನೆ ಎಂದು ಆರೋಪ ಮಾಡಿರುವ ಹೆಚ್ ಡಿ ಕುಮಾರಸ್ವಾಮಿ, ನೀನು ಹೊಟ್ಟೆಗೆ ಏನು ತಿಂತಿಯಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರು ಸೋತ ವಿಚಾರಕ್ಕೆ ಸಂಬಂಧಿಸಿದಂತೆ ತಾಯಿಗೆ ದ್ರೋಹ ಮಾಡುವ ಕೆಲಸವನ್ನು ನಾನು ಮಾಡಿಲ್ಲ.

ದೇವೇಗೌಡರು ಸೋಲಲು ನಾನು ಕಾರಣನಲ್ಲ. ನಾನು ಪ್ರಮಾಣ ಮಾಡುತ್ತೇನೆ. ನೀನು ಮಾಡುತ್ತೀಯಾ ಎಂದು ಕುಮಾರಸ್ವಾಮಿಗೆ ಎಸ್.ಆರ್. ಶ್ರೀನಿವಾಸ್ ಏಕವಚನದಲ್ಲೇ ಸವಾಲು ಹಾಕಿದರು.

ನಾನು ದೇವೆಗೌಡರ ಕತ್ತು ಕೊಯ್ದೆ ಅಂತಾರೆ. ಅಲ್ಲಿ ಶಿವನಂಜಪ್ಪಗೆ ಟಿಕೆಟ್ ಕೊಟ್ಟು, ನಂಗೆ ಸ್ವತಂತ್ರವಾಗಿ ನಿಂತ್ಕೊಳ್ಳಿ ಅಂದೋರು ಯಾರು. ಹಾಗಾದ್ರೆ, ಶಿವನಂಜಪ್ಪಗೆ ಕತ್ತು ಕೊಯ್ದಿದ್ದು ಯಾರು?. ನಿಂದು ನಾಲಿಗೆನಾ ಮತ್ತಿನ್ನೇನು?. ಗುಬ್ಬಿಗೆ ಬಂದು ಬಾಯಿಗೆ ಬಂದಂತೆ ಮಾತನಾಡಿ, ಹೆತ್ತ ತಾಯಿಗೆ ದ್ರೋಹ ಮಾಡುವ ಕೆಲಸ ಮಾಡಿದ್ದಾರೆ ಎಂದು ಗುಡಿಗಿದರು.

ನನಗೆ ಯಾರೂ ದಿಕ್ಕಿಲ್ಲ ಕಾಂಗ್ರೆಸ್​​ನವರೇ ಈಗ ನನಗೆ ದಿಕ್ಕು. ಸಿದ್ದರಾಮಣ್ಣ ಜೊತೆಲಿ ಕರಕೊಂಡು ಹೋದರೆ ಅವರ ಜೊತೆ ಹೋಗ್ತೇನೆ. ಸಿದ್ದರಾಮಣ್ಣ ಬರ್ತಾರೆ ಅಂತಾ ನಾನು ಬಂದಿದ್ದು. ಇದು ರಾಜಕೀಯ ಸಭೆಯಲ್ಲ. ಸಿದ್ದರಾಮಣ್ಣ ಕೆಲವು ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಅದಕ್ಕೆ ಬಂದಿದ್ದು ಎಂದರು.

ಮೊನ್ನೆ ಗುಬ್ಬಿಯಲ್ಲಿ ನಡೆದ ಸಭೆ ನಮ್ಮ ಗಮನಕ್ಕೆ ಬಂದಿಲ್ಲ. ಕಾರ್ಯಕರ್ತರ ಗಮನಕ್ಕೆ ಕೂಡ ಬಂದಿಲ್ಲ. ಮರ್ಯಾದೆ ಇದ್ದರೆ ಸಭೆಗೆ ಹೋಗಬೇಡಿ ಎಂದು ಹೇಳಿದ್ದೆ. ನಾನು ನಾಲ್ಕು ಬಾರಿ ಶಾಸಕನಾದವನು. ನನ್ನನ್ನು ತೆಗೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಹೆಚ್‌ಡಿಕೆ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ABOUT THE AUTHOR

...view details