ಕರ್ನಾಟಕ

karnataka

ETV Bharat / state

ಸಚಿವ ಮಾಧುಸ್ವಾಮಿಯನ್ನು ಹಾಡಿಹೊಗಳಿದ ಜೆಡಿಎಸ್ ಶಾಸಕ ಗೌರಿಶಂಕರ್ - gowry shanker praises minister madhuswamy

ತುಮಕೂರು ಜಿಲ್ಲೆಗೆ ವೃಷಭಾವತಿ ನದಿ ನೀರು ಹರಿಯಲು ಕಾರಣವಾಗಿರುವ ಸಚಿವ ಮಾಧುಸ್ವಾಮಿಯನ್ನು ಜೆಡಿಎಸ್​ ಶಾಸಕ ಗೌರಿಶಂಕರ್​ ಹಾಡಿ ಹೊಗಳಿದ್ದಾರೆ. ಇದೇ ವೇಳೆ ಮಾಜಿ ಶಾಸಕ ಸುರೇಶ್ ​ಗೌಡಗೆ ಸವಾಲೊಂದನ್ನು ಹಾಕಿದ್ದಾರೆ.

jds-mla-gowry-shanker
ಶಾಸಕ ಡಿ. ಸಿ ಗೌರಿಶಂಕರ್

By

Published : Oct 19, 2021, 7:05 PM IST

ತುಮಕೂರು: ವೃಷಭಾವತಿ ನದಿಯಿಂದ ತುಮಕೂರು ಗ್ರಾಮಾಂತರ ಕ್ಷೇತ್ರದ 25 ಕೆರೆಗಳಿಗೆ ನೀರು ಹರಿಸಲು ಹಣ ನೀಡಿರುವ ಸಚಿವ ಮಾಧುಸ್ವಾಮಿಗೆ ಧನ್ಯವಾದ ತಿಳಿಸುವುದಾಗಿ ಜೆಡಿಎಸ್ ಶಾಸಕ ಡಿ. ಸಿ ಗೌರಿಶಂಕರ್ ಹೇಳಿದ್ದಾರೆ.

ಜೆಡಿಎಸ್ ಶಾಸಕ ಡಿ. ಸಿ ಗೌರಿಶಂಕರ್

ಈ ಮೂಲಕ ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ಶಾಸಕರೊಬ್ಬರು ಬಿಜೆಪಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಹೊಗಳಿರುವುದು ಜಿಲ್ಲೆಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆ ಆಗ್ತಿದೆ. ಈ ಕುರಿತಂತೆ ಮಾಧ್ಯಮಗೋಷ್ಠಿ ನಡೆಸಿದ ಶಾಸಕ ಡಿ ಸಿ ಗೌರಿಶಂಕರ್, ಧನ್ಯವಾದ ಹೇಳಬೇಕೋ ಬೇಡ್ವಾ, ಆ ಪುಣ್ಯಾತ್ಮನಿಗೆ ಹೇಳಬೇಕೋ ಬೇಡ್ವಾ. ಎಂದು ಕೇಳಿದರು.

ಮಾಧುಸ್ವಾಮಿ ಪುಣ್ಯಾತ್ಮ

ಮಾಧುಸ್ವಾಮಿ ಎಲ್ಲರಿಗೂ ಮಂತ್ರಿ, ಜಿಲ್ಲಾ ಮಂತ್ರಿ ಅವರೇ ಆಗಿದ್ದಾರೆ. ಒಟ್ಟು ನೆಲಮಂಗಲದಿಂದ ತುಮಕೂರಿನ 82 ಕೆರೆಗಳಿಗೆ ವೃಷಭಾವತಿ ನೀರು ಅಲೋಕೇಷನ್ ಆಗಿದೆ‌. ಒಟ್ಟು 865 ಕೋಟಿ ವೆಚ್ಚದಲ್ಲಿ ನೀರು ಅಲೋಕೇಷನ್ ಆಗಿದೆ. ಇದಕ್ಕೆ ಕೆಡಿಪಿ ಸಭೆಯಲ್ಲಿ ಮನವಿ ಮಾಡಿದ್ದೇ. ಮಾಧುಸ್ವಾಮಿ ಸ್ಪಂದಿಸಿದ್ದಾರೆ. ಹೀಗಾಗಿ, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಮಾಜಿ ಶಾಸಕ ಸುರೇಶ್​ ಗೌಡರೇ ಸಿಎಂ ಹಾಗೂ ನೀರಾವರಿ ಸಚಿವ ಗೋವಿಂದ ಕಾರಜೋಳರನ್ನ ಭೇಟಿ ಮಾಡಿ ನೀರು ತನ್ನಿ, ನೀವು ನೀರು ತಂದರೇ ನಾನು ನಿಮ್ಮ ಎದುರಿಗೆ ಚುನಾವಣೆ ನಿಲ್ಲಲ್ಲ. ಇಲ್ಲ ಅಂದರೆ ನೀವು ಕ್ಷೇತ್ರ ಬಿಟ್ಟು ಹೋಗ್ತಿರಾ? ಎಂದು ಸವಾಲು ಹಾಕಿದ್ದಾರೆ.

ಯಾರಿಗಾದರೂ ಮನವಿ ಮಾಡಿ ಗೂಳೂರು ಹೆಬ್ಬೂರು ಭಾಗದ ಕೆರೆಗಳಿಗೆ ನೀರು ತನ್ನಿ. ನನ್ನ ಆತ್ಮೀಯ ಸ್ನೇಹಿತರು, ಅಣ್ಣನ ಸಮನಾದ ಸುರೇಶ್ ಗೌಡ ಸಾಹೇಬರೇ ನೀರು ತರಿಸಿ. ಬಿಜೆಪಿ‌ ಜಿಲ್ಲಾದ್ಯಕ್ಷ ಆದಾಗ ಏನ್ ಮಾಡ್ತಿದ್ರಿ ಎಂದು ಪ್ರಶ್ನಿಸಿದ್ದಾರೆ.

ಓದಿ:ಹಿಂದೂತ್ವದ ರಕ್ತ ನನ್ನ ಮೈಯಲ್ಲಿ ಹರಿಯುತ್ತಿದೆ : ಶಾಸಕ ರೇಣುಕಾಚಾರ್ಯ

ABOUT THE AUTHOR

...view details