ಕರ್ನಾಟಕ

karnataka

ETV Bharat / state

ತುಮಕೂರಿನಲ್ಲಿ ಮಹಿಳೆ ಮೇಲೆ ಅತ್ಯಾಚಾರ, ಕೊಲೆ.. ಈ ಕಡೆಗೂ ಸ್ವಲ್ಪ ಗಮನ ಕೊಡಿ ಅಂದರು ಶಾಸಕ ಗೌರಿ ಶಂಕರ್ - ತುಮಕೂರಲ್ಲೂ ಮಹಳೆ ಮೇಲೆ ಅತ್ಯಾಚಾರ

ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಯುವತಿಯ ಜೀವ ಉಳಿದಿದೆ. ಆದರೆ, ದುರಾದೃಷ್ಟವಶಾತ್ ತುಮಕೂರು ಗ್ರಾಮಾಂತರ ಭಾಗದಲ್ಲಿ ನಡೆದ ಪ್ರಕರಣದಲ್ಲಿ ಮಹಿಳೆ ಕೊಲೆಗೀಡಾಗಿದ್ದಾರೆ. ಇದು ಅತ್ಯಂತ ನೋವಿನ ಸಂಗತಿಯಾಗಿದೆ..

jds-mla-gourishanker-and-workers-protest-over-tumkur-rape-case
ತುಮಕೂರಲ್ಲೂ ಮಹಳೆ ಮೇಲೆ ಅತ್ಯಾಚಾರ ಆಗಿದೆ

By

Published : Aug 27, 2021, 4:50 PM IST

Updated : Aug 27, 2021, 4:58 PM IST

ತುಮಕೂರು :ಮೈಸೂರಿನ ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ತುಮಕೂರು ಗ್ರಾಮಾಂತರ ಭಾಗದಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣವನ್ನು ಹಾಗೂ ಕೊಲೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅತ್ಯಾಚಾರ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಜೆಡಿಎಸ್ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಗೌರಿ ಶಂಕರ್ ಇದೇ ವೇಳೆ ಮಾತನಾಡಿ, ತುಮಕೂರು ತಾಲೂಕು ಚಿಕ್ಕಹಳ್ಳಿ ಗ್ರಾಮದ ಬಳಿ ದನ ಮೇಯಿಸಲು ಹೋಗಿದ್ದ ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ.

ತುಮಕೂರಲ್ಲೂ ಮಹಳೆ ಮೇಲೆ ಅತ್ಯಾಚಾರ.. ಜೆಡಿಎಸ್ ಪ್ರತಿಭಟನೆ

ಮೈಸೂರಿನಲ್ಲಿ ನಡೆದ ಘಟನೆಯ ಸಂದರ್ಭದಲ್ಲಿ ಇಲ್ಲಿ ಕೂಡ ಅತ್ಯಾಚಾರ ಪ್ರಕರಣ ನಡೆದಿದೆ. ಆದರೆ, ಗೃಹ ಸಚಿವರಾಗಲಿ, ಮುಖ್ಯಮಂತ್ರಿಯಾಗಲಿ ಈ ಕುರಿತು ತಕ್ಷಣ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂಬ ಹೇಳಿಕೆ ನೀಡಿಲ್ಲ. ಗ್ರಾಮೀಣ ಹಾಗೂ ನಗರ ಪ್ರದೇಶದ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯದ ಕುರಿತು ಯಾಕೆ ಈ ರೀತಿಯ ತಾರತಮ್ಯ ಎಸಗುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಯುವತಿಯ ಜೀವ ಉಳಿದಿದೆ. ಆದರೆ, ದುರಾದೃಷ್ಟವಶಾತ್ ತುಮಕೂರು ಗ್ರಾಮಾಂತರ ಭಾಗದಲ್ಲಿ ನಡೆದ ಪ್ರಕರಣದಲ್ಲಿ ಮಹಿಳೆ ಕೊಲೆಗೀಡಾಗಿದ್ದಾರೆ. ಇದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದರು.

ಓದಿ:ಪಾಲಿಕೆ ಚುನಾವಣೆ.. ಬಾಲ ಬಿಚ್ಚದಂತೆ ರೌಡಿಗಳಿಗೆ ಕಲಬುರಗಿ ಪೊಲೀಸ್​ ಆಯುಕ್ತರ ಖಡಕ್​ ಎಚ್ಚರಿಕೆ..

Last Updated : Aug 27, 2021, 4:58 PM IST

ABOUT THE AUTHOR

...view details