ತುಮಕೂರು:ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಎದುರು ಕೆಲ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಡಿ ಕೆ ಶಿವಕುಮಾರ್ ಪರವಾಗಿ ಘೋಷಣೆ ಕೂಗುತ್ತಿದ್ದಂತೆ ಡಿಸಿಎಂಗೆ ತೀವ್ರ ಇರುಸುಮುರುಸು ಉಂಟಾದ ಘಟನೆ ಜಿಲ್ಲೆಯ ತುರುವೇಕೆರೆ ತಾಲೂಕಿನ ನೊಣವಿನಕೆರೆಯಲ್ಲಿ ನಡೆಯಿತು.
ಡಿಸಿಎಂ ಅಶ್ವಥ್ ನಾರಾಯಣ್ ಮುಂದೆ ಡಿಕೆಶಿ ಪರ ಘೋಷಣೆ ಕೂಗಿದ ಕೈ, ತೆನೆ ಕಾರ್ಯಕರ್ತರು - ಉಪಮುಖ್ಯಮಂತ್ರಿ,
ಇಂದು ನೊಣವಿನಕೆರೆಯಲ್ಲಿ ಶ್ರೀ ಆದಿಚುಂಚನಗಿರಿ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಆಗಮಿಸಿದ್ದರು. ಕಾರ್ಯಕ್ರಮದ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಮಾಜಿ ಸಿಎಂ ಡಿ ಕೆ ಶಿವಕುಮಾರ್ ಪರ ಘೋಷಣೆ ಕೂಗಿದ್ರು.
ನೊಣವಿನಕೆರೆಯಲ್ಲಿ ಶ್ರೀ ಆದಿಚುಂಚನಗಿರಿ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಆಗಮಿಸಿದ್ದರು. ಪೂಜೆ ಕಾರ್ಯಕ್ರಮ ನಂತರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಿಂದೆ ಬಂದ ವೇಳೆ ಕಾರ್ಯಕರ್ತರು ಡಿಕೆ ಶಿವಕುಮಾರ್ ಪರ ಘೋಷಣೆ ಕೂಗಿದ್ರು.
ಇದರಿಂದ ತೀವ್ರ ಇರುಸುಮುರುಸು ಉಂಟಾಗುತ್ತಿದ್ದಂತೆ ಅಶ್ವಥ್ ನಾರಾಯಣ್ ಅವರು ಕೆಲಕಾಲ ಪಕ್ಕಕ್ಕೆ ತೆರಳಿದರು. ಇದೇ ವೇಳೆ ಘೋಷಣೆ ಕೂಗುತ್ತಿದ್ದವರನ್ನು ಡಿಸಿಎಂ ಗನ್ಮ್ಯಾನ್ಗಳು ಸಿಟ್ಟಿನಿಂದ ದೂರ ತಳ್ಳಿದರು. ಪರಿಸ್ಥಿತಿ ತಿಳಿಗೊಳ್ಳುತ್ತಿದ್ದಂತೆ ಡಿಸಿಎಂ ಅಶ್ವಥ್ ನಾರಾಯಣ್ ಅವರು ಶಾಸಕರಾದ ಮಸಾಲೆ ಜಯರಾಂ ಮತ್ತು ನಾಗೇಶ್ ಜೊತೆ ಸ್ಥಳದಿಂದ ತೆರಳಿದರು.