ತುಮಕೂರು: ಚುನಾವಣಾ ಪ್ರಚಾರದ ಬಹಿರಂಗ ಸಮಾವೇಶದಲ್ಲಿ ಜೆಡಿಎಸ್ ಅಭ್ಯರ್ಥಿ ಅಮ್ಮಜಮ್ಮ ವೇದಿಕೆಯಲ್ಲಿಯೇ ತಲೆಸುತ್ತಿ ಬಿದ್ದ ಘಟನೆ ನಡೆದಿದೆ.
ಶಿರಾ ಉಪಚುನಾವಣೆ: ವೇದಿಕೆಯಲ್ಲಿ ತಲ್ಲೆಸುತ್ತಿ ಬಿದ್ದ ಜೆಡಿಎಸ್ ಅಭ್ಯರ್ಥಿ - ಪ್ರಜ್ಞೆ ತಪ್ಪಿ ಬಿದ್ದ ಜೆಡಿಎಸ್ ಅಭ್ಯರ್ಥಿ ಅಮ್ಮಜಮ್ಮ
ಶಿರಾ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಅಮ್ಮಜಮ್ಮ ಅವರು ಪ್ರಜ್ಞೆತಪ್ಪಿ ಬಿದ್ದ ಘಟನೆ ಇಂದು ನಡೆಯಿತು.
ವೇದಿಕೆಯಲ್ಲಿ ತಲ್ಲೆಸುತ್ತಿ ಬಿದ್ದ ಜೆಡಿಎಸ್ ಅಭ್ಯರ್ಥಿ
ಶಿರಾ ಪಟ್ಟಣದಲ್ಲಿ ಇಂದು ಬಹಿರಂಗ ಸಮಾವೇಶದ ಅಂತಿಮ ದಿನದ ಸಭೆಯಲ್ಲಿ ಭಾಗವಹಿಸಿದ್ದ ವೇಳೆ ಈ ಘಟನೆ ನಡೆಯಿತು. ವೇದಿಕೆಯಲ್ಲಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿದ ಅಭ್ಯರ್ಥಿಯನ್ನ ತಕ್ಷಣ ಎತ್ತಿಕೊಂಡು ಹೋಗಿ ಕಾರಿನಲ್ಲಿ ಕೂರಿಸಲಾಯಿತು. ವೇದಿಕೆಯಲ್ಲಿದ್ದ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕುಮಾರಸ್ವಾಮಿ ಕೆಲಕಾಲ ಗಾಬರಿಗೊಂಡರು.
ಕೆಲ ಹೊತ್ತಿನ ಬಳಿಕ ಅಮ್ಮಜಮ್ಮ ಅವರು ಚೇತರಿಸಿಕೊಂಡರು. ನಂತರ ನಾನು ಆರೋಗ್ಯವಾಗಿದ್ದೇನೆ ಜೆಡಿಎಸ್ ಕಾರ್ಯಕರ್ತರಿಗೆ ಸಮಾಧಾನಪಡಿಸಿದರು.
Last Updated : Nov 1, 2020, 10:37 PM IST