ತುಮಕೂರು : ಬೆಂಗಳೂರು ಅರಮನೆ ಮೈದಾನದಲ್ಲಿ ಸಮಾವೇಶ ಅಯೋಜಿಸಲಾಗಿದ್ದು, 10 ಲಕ್ಷ ಜನ ಸೇರುವ ನಿರೀಕ್ಷೆಯಿದೆ ಎಂದು ಜಯಮೃತ್ಯುಂಜಯ್ಯ ಸ್ವಾಮೀಜಿ ಹೇಳಿದ್ದಾರೆ.
ಸಿದ್ಧಗಂಗಾ ಮಠದಲ್ಲಿ ನಿನ್ನೆ ವಾಸ್ತವ್ಯ ಹೂಡಿದ್ದ ಸ್ವಾಮೀಜಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಾವೇಶದ ಬಳಿಕ ಮಾರ್ಚ್ 4ವರೆಗೂ ಧರಣೆ ಸತ್ಯಾಗ್ರಹ ನಡೆಸಲಾಗುವುದು. ಮಾರ್ಚ್ 5 ನೇ ತಾರೀಕಿನಿಂದ ಅಮರಣಾಂತ ಉಪವಾಸ ನಡೆಸಲಾಗುವುದು ಎಂದರು.
ಯತ್ನಾಳ್ ಅವರಿಗೆ ನೋಟಿಸ್ ನೀಡಿರುವುದಕ್ಕೆ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು. ಯತ್ನಾಳ್ ಅವರಿಗೆ ನೀಡಿರುವ ನೋಟೀಸ್ ವಾಪಸ್ ತೆಗೆದುಕೊಳ್ಳಬೇಕು. ಯಡಿಯೂರಪ್ಪ ಹಾಗೂ ಯತ್ನಾಳ್ ಅವರ ನಡುವಿನ ಭಿನ್ನಾಭಿಪ್ರಾಯವನ್ನು ಸರಿಪಡಿಸಬೇಕು ಎಂದರು. ರಾಷ್ಟ್ರೀಯ ಬಿಜೆಪಿ ಮುಖಂಡರಿಗೆ ಮನವಿ ಮಾಡುತ್ತೇವೆ. ಪಾದಯಾತ್ರೆ ಬೆಂಗಳೂರು ಸಮೀಪ ಬರುತ್ತಿದ್ದಂತೆ ಹಲವು ಬೆಳವಣಿಗೆಗಳು ನಡೆಯುತ್ತಿವೆ. ಬೇರೆ ಸಮುದಾಯದವರು ಮೀಸಲಾತಿಗೆ ಒತ್ತಾಯಿಸಿದ್ರೆ ಸ್ವಾಗತಿಸುತ್ತೇವೆ. ಲಿಂಗಾಯತ ಸಮುದಾಯದ ಇತರ ಸ್ವಾಮೀಜಿ ಹೋರಾಟವನ್ನು ಸ್ವಾಗತ ಮಾಡುತ್ತೇವೆ. ಹಿಂದುಳಿದ ವರ್ಗಕ್ಕೆ ಸಿಎಂ ಪತ್ರ ಬರೆಸಿದ್ದಾರೆ. ಆದರೆ ಅದು ನೋಟಿಫೀಕೇಷನ್ ಆಗಿಲ್ಲ ಎಂದರು.