ತುಮಕೂರು: ನಮಗಿಂತಲೂ ಅತ್ಯಂತ ದೊಡ್ಡ ವಿಜ್ಞಾನಿ, ವೈದ್ಯ, ಮಾರ್ಗದರ್ಶಕ ಅಂದ್ರೆ ಅದು ಪ್ರಕೃತಿಯಾಗಿದೆ. ಪ್ರಕೃತಿಗಿಂತ ದೊಡ್ಡ ವಿಜ್ಞಾನಿಯಿರಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
ನಗರದಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸಿರಿಧಾನ್ಯ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ದುರಾದೃಷ್ಟಕರವೆಂದರೆ ನಾವು ಪ್ರಕೃತಿಯ ವಿರುದ್ಧವಾಗಿ ಹೋಗುತ್ತಿದ್ದೇವೆ. ನಾವು ಗುಲಾಮಗಿರಿಯನ್ನು ಒಪ್ಪಿಕೊಂಡಿದ್ದೇ ಇಂತಹ ಸ್ಥಿತಿಗೆ ಬರಲು ಕಾರಣ ಎಂದರು.