ಕರ್ನಾಟಕ

karnataka

ETV Bharat / state

ಉಗ್ರರ ದಾಳಿ ಭೀತಿ: ಕೊರಟಗೆರೆ ತಾಲೂಕಿನ ವಿವಿಧೆಡೆ ಪೊಲೀಸರಿಂದ ಪರಿಶೀಲನೆ - ಡಾಗ್ ಸ್ಕ್ವಾ ಡ್ ಜೊತೆ ಪೊಲೀಸರು ಪರಿಶೀಲನೆ

ಉಗ್ರರ ದಾಳಿ ಭೀತಿಯಿಂದಾಗಿ ದೇಶದೆಲ್ಲೆಡೆ ಬಿಗಿ ಬಂದೋಬಸ್ತ್​​ ಕಲ್ಪಿಸಲಾಗಿದ್ದು, ತುಮಕೂರಿನ ಕೊರಟಗೆರೆಯಲ್ಲೂ ಸಹ ಮುಂಜಾಗ್ರತ ಕ್ರಮವಾಗಿ ಪೊಲೀಸರು ಪರಿಶೀಲನೆ ನಡೆಸಿದರು.

ಪರಿಶೀಲನೆ ನಡೆಸುತ್ತಿರುವ ತಂಡ

By

Published : Aug 21, 2019, 10:35 AM IST


ತುಮಕೂರು: ಹಲವು ದಿನಗಳಿಂದ ರಾಜ್ಯದಲ್ಲಿ ಉಗ್ರರ ದಾಳಿ ಭೀತಿ ಇದ್ದು, ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ತುಮಕೂರು ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ನಿರಂತರವಾಗಿ ಪೊಲೀಸರು ಗಸ್ತು ತಿರುಗಿ ಪರಿಶೀಲನೆ ನಡೆಸುತ್ತಿದ್ದಾರೆ.

ಪರಿಶೀಲನೆ ನಡೆಸುತ್ತಿರುವ ತಂಡ
ಇಂದು ಕೊರಟಗೆರೆ ತಾಲೂಕಿನ ಗೊರವನಹಳ್ಳಿಯ ವರಮಹಾಲಕ್ಷ್ಮಿ ದೇವಾಲಯದ ಸುತ್ತಮುತ್ತಲ ಪ್ರದೇಶದಲ್ಲಿ ಡಾಗ್ ಸ್ಕ್ವಾಡ್ ಜೊತೆ ಬಂದಿದ್ದ ಪೊಲೀಸರು ಪರಿಶೀಲನೆ ನಡೆಸಿದರು. ಹಾಗೂ ತಾಲೂಕಿನ ತೀತಾ ಜಲಾಶಯದ ಸುತ್ತಲೂ ಬಾಂಬ್ ನಿಗ್ರಹ ದಳದ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಪರಿಶೀಲನೆ ನಡೆಸಿದರು.

ಕೊರಟಗೆರೆ ಪಟ್ಟಣದ ಬಸ್ ನಿಲ್ದಾಣಕ್ಕೂ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ABOUT THE AUTHOR

...view details