ಕರ್ನಾಟಕ

karnataka

ETV Bharat / state

ಮಧುಗಿರಿ: ಗೋಡ್ಸೆ ಫೋಟೋ ಇರುವ ಫ್ಲೆಕ್ಸ್​​ ಹಾಕಿ ಸ್ವಾತಂತ್ರ್ಯ ದಿನಾಚರಣೆ - ಗೋಡ್ಸೆ ಪೋಟೋ ಬಳಕೆ

ಮಧುಗಿರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಗೋಡ್ಸೆ ಫೋಟೋ ಇರುವ ಫ್ಲೆಕ್ಸ್​​ ಹಾಕಿರುವ ಘಟನೆ ನಡೆದಿದೆ.

ಗೋಡ್ಸೆ ಫೋಟೋ ಇರುವ ಫ್ಲೆಕ್ಸ್​​ ಹಾಕಿ ಸ್ವಾತಂತ್ರ್ಯ ದಿನಾಚರಣೆ
ಗೋಡ್ಸೆ ಫೋಟೋ ಇರುವ ಫ್ಲೆಕ್ಸ್​​ ಹಾಕಿ ಸ್ವಾತಂತ್ರ್ಯ ದಿನಾಚರಣೆ

By

Published : Aug 17, 2022, 8:11 PM IST

Updated : Aug 17, 2022, 8:36 PM IST

ತುಮಕೂರು: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಫ್ಲೆಕ್ಸ್​​ವೊಂದರಲ್ಲಿ ಗಾಂಧಿ ಫೋಟೋಗಿಂತ ಮೇಲ್ಭಾಗದಲ್ಲಿ ನಾಥೂರಾಮ್ ಗೋಡ್ಸೆ ಫೋಟೋ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಮಧುಗಿರಿ ಪಟ್ಟಣದ ದಂಡಿನ ಮಾರಮ್ಮ ದೇವಸ್ಥಾನದ ಬಳಿ ಘಟನೆ ನಡೆದಿದೆ.

ಭಗತ್‌ಸಿಂಗ್ ಯೂಥ್ ಅಸೋಸಿಯೇಷನ್‌ನ ಡಿ.ಎಂ.ಬಡಾವಣೆ ಎಂಬ ಹೆಸರು ಬಳಸಿಕೊಂಡು ಫ್ಲೆಕ್ಸ್‌ ಅಳವಡಿಸಲಾಗಿದೆ. ಆದರೆ ಈ ಹೆಸರಿನ ಸಂಘಟನೆ ಪಟ್ಟಣದಲ್ಲಿಲ್ಲ. ಫ್ಲೆಕ್ಸ್​​ನಲ್ಲಿ ಭಗತ್​​ಸಿಂಗ್, ಸರ್ದಾರ್​​ ವಲ್ಲಭಭಾಯ್ ಪಟೇಲ್, ಚಂದ್ರಶೇಖರ್ ಆಜಾದ್, ಸುಭಾಷ್ ಚಂದ್ರಬೋಸ್, ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್​​ ಶಾಸ್ತ್ರಿ, ಕಿತ್ತೂರಿ ರಾಣಿ ಚೆನ್ನಮ್ಮ ಜೊತೆಗೆ ಗೋಡ್ಸೆ ಫೋಟೋ ಕಾಣುತ್ತಿದೆ.

ಇದನ್ನೂ ಓದಿ:ಶಿವಮೊಗ್ಗದ ಬಳಿಕ ತುಮಕೂರಲ್ಲೂ ವೀರ ಸಾವರ್ಕರ್ ಫ್ಲೆಕ್ಸ್ ಹರಿದ ಕಿಡಿಗೇಡಿಗಳು

ಮಧುಗಿರಿ ಪುರಸಭೆಯಿಂದಲೂ ಅನುಮತಿ ಪಡೆಯದೆ ಈ ಫ್ಲೆಕ್ಸ್​​ ಹಾಕಲಾಗಿದೆ. ಫ್ಲೆಕ್ಸ್​​ ತೆರವುಗೊಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Last Updated : Aug 17, 2022, 8:36 PM IST

ABOUT THE AUTHOR

...view details