ತುಮಕೂರು: ನಗರದ ಕನ್ನಡ ಭವನದಲ್ಲಿ ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಮತ್ತು ತುಮಕೂರು ಹಾಲು ಒಕ್ಕೂಟ ಆರೋಗ್ಯ ಇಲಾಖೆ ಹಾಗೂ ಇತರ ಜಿಲ್ಲಾ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಹಕಾರ ಸಚಿವ ಎಸ್. ಟಿ ಸೋಮಶೇಖರ್, ರಾಜ್ಯದಲ್ಲಿನ ಸುಮಾರು 40,250 ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನವಾಗಿ 3,000 ರೂ. ಪ್ರತಿಯೊಬ್ಬರಿಗೂ ನೀಡಲಾಗುತ್ತಿದೆ. ತುಮಕೂರು ಜಿಲ್ಲೆಯಲ್ಲಿರುವ 2,130 ಆಶಾ ಕಾರ್ಯಕರ್ತೆಯರಿಗೆ ಹಣ ನೀಡಲಾಗಿದೆ ಎಂದು ತಿಳಿಸಿದರು.
ಪ್ರೋತ್ಸಾಹಧನ ವಿತರಣಾ ಕಾರ್ಯಕ್ರಮ ರಾಜ್ಯದಲ್ಲಿ ಸುಮಾರು ಮಂತ್ರಿಗಳಿದ್ದಾರೆ, ಆದರೆ ಖಡಕ್ ಮಂತ್ರಿ ಎಂದರೆ ಮಾಧುಸ್ವಾಮಿ ಅವರು, ಯಾವುದೇ ವಿಚಾರವಾದರೂ ಸಹ ನೇರವಾಗಿ ಹೇಳುತ್ತಾರೆ ನನಗೆ ಮತ್ತು ಬೈರತಿ ಬಸವರಾಜು ಅವರಿಗೆ ಮಾಧುಸ್ವಾಮಿ ಅವರ ನಡೆ - ನುಡಿ ಆದರ್ಶ ಎಂದರು.
ನಂತರ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ, ಆಶಾ ಕಾರ್ಯಕರ್ತೆಯರು ತಮ್ಮ ಯೋಗಕ್ಷೇಮ ಮರೆತು, ಪ್ರತಿಯೊಂದು ಮನೆಗಳಿಗೂ ಭೇಟಿ ನೀಡಿ, ಅಲ್ಲಿಯವರ ವಿವರ ಪಡೆದು ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ನೇರವಾಗಿ ಮಾಹಿತಿ ನೀಡುವ ಮೂಲಕ ನೆರವಾಗಿದ್ದಾರೆ ಎಂದರು.
ಪ್ರೋತ್ಸಾಹಧನ ವಿತರಣಾ ಕಾರ್ಯಕ್ರಮ ಎರಡನೇ ಹಂತದ ಕೋವಿಡ್-19 ತಡೆಯಲು ಆಶಾ ಕಾರ್ಯಕರ್ತೆಯರಿಂದ ಮಾತ್ರ ಸಾಧ್ಯ ಎಂದು ಸಭೆ ನಡೆಸಿ ನಾವು ತೀರ್ಮಾನ ತೆಗೆದುಕೊಂಡೆವು. ಅದೇ ರೀತಿ, ತುಮಕೂರು ಮತ್ತು ಹಾಸನ ಜಿಲ್ಲೆಯಲ್ಲಿ ಸರ್ವೆ ನಡೆಸಲಾಯಿತು. ತಾವೆಲ್ಲರೂ ಶ್ರಮ ವಹಿಸಿ ಕರ್ತವ್ಯ ನಿರ್ವಹಿಸಿದ್ದೀರಿ, ಅದಕ್ಕೆ ಹೋಲಿಸಿದರೆ ನಾವು ಪುರಸ್ಕರಿಸುತ್ತಿರುವುದು ದೊಡ್ಡ ವಿಚಾರವಲ್ಲ ಎಂದರು.
ಇದೇ ವೇಳೆ ,ಆಶಾ ಕಾರ್ಯಕರ್ತೆಯರಿಗೆ ಹಾಗೂ ಬಡ ಬೀದಿ ಬದಿ ವ್ಯಾಪಾರಿಗಳಿಗೆ ಪ್ರೋತ್ಸಾಹಧನ ವಿತರಣೆ ಮಾಡಲಾಯಿತು.