ತುಮಕೂರು: ಜಿಲ್ಲೆಯಲ್ಲಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ಬಾರ್ಗಳು ಬಂದ್ ಆಗಿವೆ. ಈ ಹಿನ್ನೆಲೆ ಮದ್ಯಪ್ರಿಯರು ಮದ್ಯವನ್ನು ಕದಿಯುವುದು, ಕಳ್ಳಸಾಗಣೆ ಮಾಡಿ ಪೊಲೀಸರಿಗೆ ಸಿಕ್ಕಿಬೀಳುವುದು ಸಾಮಾನ್ಯವಾಗಿಬಿಟ್ಟಿದೆ.
ಅಕ್ರಮ ಮದ್ಯ ಸಾಗಣೆ, ಹೊಸ ಕಾರನ್ನೇ ಬಿಟ್ಟು ಪರಾರಿ - news of corona
ತುಮಕೂರು ನಗರದ ರಾಷ್ಟ್ರೀಯ ಹೆದ್ದಾರಿ 48ರ ಸರ್ವಿಸ್ ರಸ್ತೆಯ ಬೆಳಗುಂಬ ಬಳಿ ಈ ಘಟನೆ ಜರುಗಿದೆ.ವ್ಯಕ್ತಿ ತನ್ನ ನೂತನ ಕಾರನ್ನೇ ಬಿಟ್ಟು ಪರಾರಿಯಾಗಿದ್ದಾನೆ.
ಅಕ್ರಮ ಮದ್ಯ ಸಾಗಾಟ,
ತುಮಕೂರು ನಗರದ ರಾಷ್ಟ್ರೀಯ ಹೆದ್ದಾರಿ 48ರ ಸರ್ವಿಸ್ ರಸ್ತೆಯ ಬೆಳಗುಂಬ ಬಳಿ ಹೊಸ ಸ್ವಿಫ್ಟ್ ಕಾರಿನಲ್ಲಿ ವ್ಯಕ್ತಿಯೋರ್ವ ಮದ್ಯ ಸಾಗಿಸುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾಳಿ ನಡೆಸಿದ ಹಿನ್ನೆಲೆ ವ್ಯಕ್ತಿ ಹೊಸ ಕಾರನ್ನೇ ಬಿಟ್ಟು ಪರಾರಿಯಾಗಿದ್ದಾನೆ. ಕಾರಿನಲ್ಲಿದ್ದ 62 ಲೀ. ಮದ್ಯವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕಾರಿನ ನೋಂದಣಿ ಕೂಡ ಆಗಿಲ್ಲದಿರುವುದು ಗಮನಾರ್ಹ.