ತುಮಕೂರು:ಲಾಕ್ಡೌನ್ ವೇಳೆ ಕೋಳಿ ಹಾಗೂ ಮಾಂಸ ಸಾಕಣೆ ಮಾಡಲು ನೀಡಲಾಗಿರೋ ಪಾಸ್ ಬಳಸಿ ಖಸಾಯಿಖಾನೆಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಗುಬ್ಬಿ ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೋಳಿ, ಮಾಂಸ ಸಾಗಣೆ ನೀಡುವ ಪಾಸ್ ಬಳಸಿ ಜಾನುವಾರು ರವಾನೆ: ಇಬ್ಬರ ಬಂಧನ - ಪಾಸ್ ದುರುಪಯೋಗ
ನೀಡಲಾಗಿದ್ದ ಪಾಸ್ ದುರುಪಯೋಗ ಹಾಗೂ ಅಕ್ರಮವಾಗಿ ಜಾನುವಾರುಗಳನ್ನು ಖಸಾಯಿಖಾನೆಗೆ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ತುಮಕೂರಿನಲ್ಲಿ ಬಂಧಿಸಲಾಗಿದೆ.
ಕೋಳಿ, ಮಾಂಸ ಸಾಗಣೆ ನೀಡುವ ಪಾಸ್ ಬಳಸಿ ಜಾನುವಾರು ಸಾಗಾಟ
ಬೆಳಗ್ಗೆ ಸುಮಾರು 9 ಗಂಟೆ ವೇಳೆಯಲ್ಲಿ ಗುಬ್ಬಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 206ರ ಶಿಲ್ಪಾ ಸಾಮಿಲ್ ಮುಂಭಾಗ ಪೊಲೀಸ್ ಚೆಕ್ ಪೋಸ್ಟ್ನಲ್ಲಿ ವಾಹನವನ್ನು ತಡೆದಾಗ ವಿಷಯ ಬೆಳಕಿಗೆ ಬಂದಿದೆ.
ಮುಕ್ತಿಯಾರ್, ಸೈಯದ್ ಎಂಬಿಬ್ಬರು ತಿಪಟೂರಿನಿಂದ ಬೆಂಗಳೂರಿಗೆ ಮೂರು ಜಾನುವಾರುಗಳನ್ನು ಟೆಂಪೋದಲ್ಲಿ ಸಾಗಿಸುತ್ತಿದ್ದರು. ಇಬ್ಬರನ್ನು ವಶಕ್ಕೆ ವಶಕ್ಕೆ ಪಡೆದಿರುವ ಗುಬ್ಬಿ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ.