ಕರ್ನಾಟಕ

karnataka

ETV Bharat / state

ತುಮಕೂರು: ಸೀಲ್ ಡೌನ್ ಪ್ರದೇಶಗಳಿಗೆ ಐಜಿಪಿ ಶರತ್ ಚಂದ್ರ ಭೇಟಿ, ಪರಿಶೀಲನೆ

ಸೋಂಕಿತರು ಪತ್ತೆಯಾದ ತುಮಕೂರು ಜಿಲ್ಲೆಯ ಪ್ರದೇಶಗಳನ್ನು ಸೀಲ್ ಡೌನ್ ಮಾಡಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಸೀಲ್ ಡೌನ್ ಪ್ರದೇಶಗಳಿಗೆ ಐಜಿಪಿ ಶರತ್ ಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

IGP Sarath Chandra visits seal down areas
ಸೀಲ್ ಡೌನ್ ಪ್ರದೇಶಗಳಿಗೆ ಐಜಿಪಿ ಶರತ್ ಚಂದ್ರ ಭೇಟಿ, ಪರಿಶೀಲನೆ......

By

Published : May 24, 2020, 10:42 AM IST

ತುಮಕೂರು: ಜಿಲ್ಲೆಯಲ್ಲಿ ಸೋಂಕಿತರು ಪತ್ತೆಯಾದ ಪ್ರದೇಶಗಳನ್ನು ಸೀಲ್ ಡೌನ್ ಮಾಡಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಸೀಲ್ ಡೌನ್ ಪ್ರದೇಶಗಳಿಗೆ ಐಜಿಪಿ ಶರತ್ ಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

17 ಮಂದಿ ಕೊರೊನಾ ಸೋಂಕಿತರು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿದ್ದ ಮನೆಗಳ ಸುತ್ತಮುತ್ತಲಿನ ಪ್ರದೇಶಗಳನ್ನು ಸೀಲ್​ ಮಾಡಲಾಗಿದೆ. ಸೀಲ್​ ಆದ ಪ್ರದೇಶಗಳಾದ ಸದಾಶಿವನಗರ, ಕೆಹೆಚ್​ಬಿ ಕಾಲೋನಿ ಮತ್ತು ಖಾದರ್ ನಗರಗಳಿಗೆ ಕೇಂದ್ರವಲಯದ ಐಜಿಪಿ ಶ್ರೀ ಶರತ್ ಚಂದ್ರ ಭೇಟಿ ನೀಡಿ ಪರಿಶೀಲಿಸಿದರು. ಆನಂತರ ಸೀಲ್ ಡೌನ್ ಪ್ರದೇಶಗಳಲ್ಲಿ ತೆಗೆದುಕೊಂಡಿರುವ ಕ್ರಮಗಳ ಮಾಹಿತಿ ಪಡೆದರು.

ABOUT THE AUTHOR

...view details