ಕರ್ನಾಟಕ

karnataka

ETV Bharat / state

ಪಾವಗಡ ರಸ್ತೆ ದುರಸ್ತಿಯಾಗದಿದ್ದಲ್ಲಿ ಕೇಶಿಪ್‍ ವಿರುದ್ಧ ಕ್ರಿಮಿನಲ್ ಮೊಕದ್ದಮೆ: ಸೋಗಡು ವೆಂಕಟೇಶ್ - ತುಮಕೂರು ರಸ್ತೆ ಸುದ್ದಿ

ಪಾವಗಡ ಪಟ್ಟಣದಲ್ಲಿನ ರಸ್ತೆ ಗುಂಡಿಯನ್ನು ಕೂಡಲೇ ದುರಸ್ತಿ ಮಾಡದಿದ್ದಲ್ಲಿ ಕೇಶಿಪ್‍ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದೆಂದು ಪಾವಗಡ ತಾ.ಪಂ. ಅಧ್ಯಕ್ಷ ಸೋಗಡು ವೆಂಕಟೇಶ್ ಎಚ್ಚರಿಕೆ ರವಾನಿಸಿದ್ದಾರೆ.

ರಸ್ತೆ ದುರಸ್ಥಿಯಾಗದಿದ್ದಲ್ಲಿ ಕೇಶಿಪ್‍ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು : ಸೋಗುಡು ವೆಂಕಟೇಶ್

By

Published : Nov 1, 2019, 5:20 PM IST

ತುಮಕೂರು:ಪಟ್ಟಣದ ಶನಿಮಹಾತ್ಮ ದೇವಾಲಯದ ಸಮೀಪ ಕಳೆದೆರಡು ತಿಂಗಳಿನಿಂದ ಬಿದ್ದಿರುವ ಗುಂಡಿಯನ್ನು ಕೂಡಲೇ ದುರಸ್ತಿ ಮಾಡದಿದ್ದಲ್ಲಿ ಕೆಶಿಪ್‍ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದೆಂದು ಪಾವಗಡ ತಾಲೂಕು ಪಂಚಾಯತ್ ಅಧ್ಯಕ್ಷ ಸೋಗಡು ವೆಂಕಟೇಶ್ ಹೇಳಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿರಾ ರಸ್ತೆಯ ಪ್ರಮುಖ ರಸ್ತೆಯಲ್ಲಿ ಗುಂಡಿಬಿದ್ದಿದ್ದು, ಈ ಭಾಗದಲ್ಲಿ ನಿರ್ಮಾಣ ಮಾಡಿರುವ ಸಿಸಿ ರಸ್ತೆಯು ಕೂಡ ಕಳಪೆಯಾಗಿ ಕಿತ್ತುಹೋಗಿದೆ. ಇಲ್ಲಿ ಗುಂಡಿ ಬಿದ್ದಿರುವ ಚರಂಡಿಯನ್ನು, ಕೆಶಿಪ್‍ನಿಂದ ಗುತ್ತಿಗೆ ಪಡೆದ ಕಂಪನಿ ಯಾವ ರೀತಿ ನಿರ್ಮಾಣ ಮಾಡಿದೆ ಅನ್ನೋದು ಗೊತ್ತಾಗುತ್ತಿಲ್ಲ ಎಂದರು.

ರಸ್ತೆ ದುರಸ್ತಿ ಆಗದಿದ್ದಲ್ಲಿ ಕೆಶಿಪ್‍ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು: ಸೋಗಡು ವೆಂಕಟೇಶ್

ಅಷ್ಟೇ ಅಲ್ಲದೆ, ಶಿರಾ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಒನ್​ ವೇ ಆಗಿ ಚಲಿಸುವಂತಾಗಿ ವಾಹನ ಸವಾರರು ಪ್ರತಿದಿನ ಪರದಾಡುವಂತಾಗಿದೆ. ಇದೇ ವಿಚಾರವಾಗಿ ಕೆಶಿಪ್‍ ಇಲಾಖೆಗೆ ಹಲವು ಬಾರಿ ಮಾಹಿತಿ ನೀಡಿದರು ಪ್ರಯೋಜನವಿಲ್ಲದಂತಾಗಿದೆ. ಇನ್ನು ಪುರಸಭೆಯವರು ಜವಬ್ದಾರಿ ವಹಿಸಿಕೊಂಡು ಮುಖ್ಯಾಧಿಕಾರಿಗಳು ಪ್ರತಿದಿನ ಇದೇ ರಸ್ತೆಯಲ್ಲಿ ಒಡಾಡುತ್ತಿದ್ದರೂ ಸಹ ಸಮಸ್ಯೆಗಳನ್ನು ಕಂಡು ಕಾಣದಂತೆ ವರ್ತಿಸುತ್ತಿರುವ ಕಾರಣ ವಾಹನ ಸವಾರರು, ಸಾವರ್ಜನಿಕರು ಜನಪ್ರತಿನಿಧಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸುವಂತಾಗಿದೆ. ಹಾಗಾಗಿ ಕೆಶಿಪ್‍ ಮತ್ತು ಪುರಸಭೆಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುತ್ತೇನೆ ಎಂದು ಎಚ್ಚರಿಕೆ ಸೊಗಡು ಎಚ್ಚರಿಕೆ ರವಾನಿಸಿದರು.

ಇನ್ನು, ತಾ.ಪಂ. ವ್ಯಾಪ್ತಿಗೆ ಪಟ್ಟಣದ ಸಮಸ್ಯೆಗಳು ಬರದಿದ್ದರೂ ಕೂಡ ಸಾರ್ವಜನಿಕರ ಹಿತದೃಷ್ಠಿಯಿಂದ ನೋಡಿದರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೀದಿ ದೀಪಗಳಿಲ್ಲದ ಕಾರಣ ಕತ್ತಲ ವಾತಾವರಣ ನಿರ್ಮಾಣವಾಗಿದೆ. ಹಲವು ಬಾರಿ ಸಭೆಯಲ್ಲಿ ಸೂಚಿಸಿದರೂ ಸಹ ಕ್ರಮ ಕೈಗೊಳ್ಳುವಲ್ಲಿ ಇಲಾಖೆಗಳು ವಿಫಲಾಗಿವೆ. ಕೆಶಿಪ್‍ನಿಂದ ಗುತ್ತಿಗೆ ಪಡೆದ ಕಂಪನಿಗೆ ರಸ್ತೆ ನಿರ್ಮಾಣದ ನಂತರ ನೀಡುವ ರಸ್ತೆ ನಿರ್ವಹಣೆಯ ಹಣವನ್ನು ತಡೆಹಿಡಿಯಬೇಕು. ಹಾಗೆಯೇ ತಮ್ಮ ಸ್ವಂತ ಖರ್ಚಿನಲ್ಲಿ ಇಲ್ಲಿನ ಗುಂಡಿಯನ್ನು ಸರಿಪಡಿಸಿ ಸಂಬಂಧಪಟ್ಟ ಇಲಾಖೆಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ತಾಲೂಕು ಪಂಚಾಯತ್​ ಅಧ್ಯಕ್ಷ ಗುಡುಗಿದರು.

ABOUT THE AUTHOR

...view details