ತುಮಕೂರು: "ನಾನು ಗೋಣಿ ಚೀಲಗಳನ್ನು ಮಾರಿದರೂ ಕೋಟಿ ರೂಪಾಯಿ ಬರುತ್ತೆ. ನನಗೆ ದುಡ್ಡಿನ ಅವಶ್ಯಕತೆ ಇಲ್ಲ" ಎಂದು ತುರುವೇಕೆರೆ ಬಿಜೆಪಿ ಶಾಸಕ ಮಸಾಲೆ ಜಯರಾಮ್ ತಿಳಿಸಿದ್ದಾರೆ.
'ಬಿಜೆಪಿಯಲ್ಲಿ ನನ್ನನ್ನು ಯಡಿಯೂರಪ್ಪರ ಮಗನಿಗಿಂತ ಚೆನ್ನಾಗಿ ನೋಡಿಕೊಳ್ತಿದ್ದಾರೆ' - masale jayaram joins congress
ಬಿಜೆಪಿ ಬಿಡುವ ಮಾತೇ ಇಲ್ಲ. ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ. ನಾನಿನ್ನೂ 20 ವರ್ಷ ನಿಮ್ಮ ಜೊತೆ ಇರುತ್ತೇನೆ ಎಂದು ಶಾಸಕ ಮಸಾಲೆ ಜಯರಾಮ್ ಹೇಳಿದರು.
ಶಾಸಕ ಮಸಾಲೆ ಜಯರಾಮ್
ಮಂಗಳವಾರ ತಮ್ಮ ಕ್ಷೇತ್ರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, "ನನಗೆ ಡೀಲ್ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಇನ್ನು ಪಕ್ಷ ಬಿಡುವ ಮಾತಂತೂ ಇಲ್ಲ. ನನಗೆ ನೀವು ಶಕ್ತಿ ಕೊಟ್ಟಿದ್ದೀರಿ. ಬಿಜೆಪಿಯಲ್ಲಿ ನನ್ನನ್ನು ಯಡಿಯೂರಪ್ಪರ ಮಗನಿಗಿಂತ ಚೆನ್ನಾಗಿ ನೋಡಿಕೊಳ್ತಿದ್ದಾರೆ. ನನ್ನನ್ನು ನಾನು ಮಾರಿಕೊಳ್ಳುವ ಅವಶ್ಯಕತೆ ಇಲ್ಲ. ನಾನೊಬ್ಬ ಗ್ರಾಮ ಪಂಚಾಯಿತಿ ಸದಸ್ಯನಾಗಿ, ಅಧ್ಯಕ್ಷನಾಗಿ ದೇಶದ ಪ್ರಧಾನಿ ಮೋದಿ ಜೊತೆಗೆ ವೇದಿಕೆ ಹಂಚಿಕೊಂಡಿದ್ದೇನೆ" ಎಂದರು.
ಇದನ್ನೂ ಓದಿ:ಪಿಎಸ್ಐ ಹಗರಣ: ಮಂಪರು ಪರೀಕ್ಷೆಗೆ ಎಡಿಜಿಪಿ ಅಮೃತ್ ಪೌಲ್ ಅಸಮ್ಮತಿ