ಕರ್ನಾಟಕ

karnataka

ETV Bharat / state

ನನ್ನನ್ನು ಯಾರೂ ಕಾಂಗ್ರೆಸ್‌ ಪಕ್ಷಕ್ಕೆ ಬರುವಂತೆ ಆಹ್ವಾನಿಸಿಲ್ಲ: ಸಚಿವ ಮಾಧುಸ್ವಾಮಿ - minister madhuswamy news

ನನಗೆ ಯಾರೂ ಕಾಂಗ್ರೆಸ್​ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿಲ್ಲ ಎಂದು ತುಮಕೂರಿನಲ್ಲಿ ಸಚಿವ ಮಾಧುಸ್ವಾಮಿ ಹೇಳಿದರು.

madhuswamy
ಸಚಿವ ಮಾಧುಸ್ವಾಮಿ ಪ್ರತಿಕ್ರಿಯೆ

By

Published : Jul 5, 2021, 3:22 PM IST

ತುಮಕೂರು:ನನ್ನನ್ನು ಯಾವ ಕಾಂಗ್ರೆಸ್​ನವರೂ​ ಪಕ್ಷಕ್ಕೂ ಬರುವಂತೆ ಕರೆದಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ಬಂದು ಚಿಕ್ಕನಾಯಕನಹಳ್ಳಿಯಲ್ಲಿ ಚುನಾವಣೆಗೆ ಸ್ಪರ್ಧಿಸಿದರೆ ಸಂತೋಷಪಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸಚಿವ ಮಾಧುಸ್ವಾಮಿ ಪ್ರತಿಕ್ರಿಯೆ

ದೇವೇಗೌಡರು ಬಂದು ತುಮಕೂರಿನಲ್ಲಿ ಕಣಕ್ಕಿಳಿದಿದ್ದರು. ಸುಮಾರು ಮೂವತ್ತು ವರ್ಷದಿಂದ ರಾಜಕಾರಣ ಮಾಡಿದ್ದೇವೆ. ಯಾರೋ ಬಂದು ಚುನಾವಣೆಗೆ ಸ್ಪರ್ಧಿಸಿದರೆ ನಾವು ಸುಮ್ಮನಿರಲು ಸಾಧ್ಯವೇ? ಎಂದರು.

ನಾವು ಚುನಾವಣೆಗೆ ನಿಲ್ಲಬೇಕು, ನಿಲ್ಲುತ್ತೇವೆ. ಯಾರು ಬರ್ತಾರೋ ಗೊತ್ತಿಲ್ಲ, ಸಿದ್ದರಾಮಯ್ಯನವರನ್ನು ಬರಬೇಡಿ ಎನ್ನಲಾಗುತ್ತದೆಯೇ?, ದೇವೇಗೌಡರನ್ನು ಬರಬೇಡಿ ಎಂದು ಹೇಳಿದ್ವಾ? ಎಂದು ಹೇಳಿದರು.

ABOUT THE AUTHOR

...view details