ಕರ್ನಾಟಕ

karnataka

ETV Bharat / state

ಅನೈತಿಕ ಸಂಬಂಧ ಹಿನ್ನೆಲೆ: ಪತಿಯನ್ನು ಹತ್ಯೆಗೈದ ಪತ್ನಿ, ಪ್ರಿಯಕರ - ತುಮಕೂರಿನಲ್ಲಿ ಪತ್ನಿತಯಿಂದಲೇ ಗಂಡ ಕೊಲೆ

ತುಮಕೂರು ನಗರದ ಶಿರಾಗೇಟ್​ ಹೊಂಬಯ್ಯ ಪಾಳ್ಯದ ನಿವಾಸಿ ಹನುಮೇಗೌಡ ಎಂಬ ವ್ಯಕ್ತಿಯನ್ನು ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಕೊಲೆಗೈದಿರುವ ಘಟನೆ ನಡೆದಿದೆ.

Husband's murder background wife immoral relationship
ಆರೋಪಿಗಳಾದ ಸತೀಶ್​, ವಿದ್ಯಾ

By

Published : Dec 4, 2019, 10:55 PM IST

ತುಮಕೂರು: ಅನೈತಿಕ ಸಂಬಂಧ ಹಿನ್ನೆಲೆ ಪ್ರಿಯಕರ ಹಾಗೂ ಪತ್ನಿ ಸೇರಿ ಪತಿಯನ್ನು ಹತ್ಯೆಗೈದ ಘಟನೆ ತುಮಕೂರು ನಗರದ ಶಿರಾಗೇಟ್ ಹೊಂಬಯ್ಯ ಪಾಳ್ಯದಲ್ಲಿ ನಡೆದಿದೆ.

ಎಸ್​ಪಿ ವಂಶಿಕೃಷ್ಣ

ಕೊಲೆಯಾದ ದುರ್ದೈವಿ ಪತಿ ಪಾಪಣ್ಣ ಅಲಿಯಾಸ್​ ಹನುಮೇಗೌಡ (43) ಎಂಬುವವರು ಡಾಬಾದಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ವಿದ್ಯಾ ಹಾಗೂ ಪ್ರಿಯಕರ ಸತೀಶ್​​ ಜೊತೆಯಲ್ಲಿದ್ದಿದ್ದನ್ನು ಹನುಮೇಗೌಡ ನೋಡಿದ್ದಾರೆ ಎನ್ನಲಾಗಿದೆ. ಈ ವೇಳೆ ಪತಿ ಹಾಗೂ ಪ್ರಿಯಕರನ ನಡುವೆ ಜಗಳವಾಗಿದ್ದು, ಸತೀಶ್​ ಹಾಗೂ ವಿದ್ಯಾ ಸೇರಿ ಚಾಕುವಿನಿಂದ ಹನುಮೇಗೌಡನನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು. ಸತೀಶ್​ ಆಟೋ ಚಾಲಕನಾಗಿದ್ದು, 4 ತಿಂಗಳ ಹಿಂದೆ ವಿದ್ಯಾಗೆ ಪರಿಚಯವಾಗಿದ್ದನಂತೆ. ಒಂದು ತಿಂಗಳ ಹಿಂದೆ ಪತಿ ಹನುಮೇಗೌಡ ತುಮಕೂರಿಗೆ ವಾಪಾಸ್ಸಾಗಿದ್ದಾನೆ. ಈ ಬಗ್ಗೆ ತುಮಕೂರು ನಗರ ಪೊಲೀಸರು ಡಿ.2ರಂದು ಪ್ರಕರಣ ದಾಖಲಿಸಿಕೊಂಡಿದ್ದರು. ಡಿ.3ರಂದು ಆರೋಪಿಗಳನ್ನು ಅರೆಸ್ಟ್‌ ಮಾಡಿದ್ದಾರೆ.

ಅನೈತಿಕ ಸಂಬಂಧ ಹೊಂದಿದ್ದ ಇಬ್ಬರೂ ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಆರೋಪಿಗಳನ್ನು 24 ಗಂಟೆಯೊಳಗೆ ಪತ್ತೆ ಹಚ್ಚಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಕೆಲವು ಮಾಹಿತಿಯನ್ನು ಬಹಿರಂಗಪಡಿಸಿದ್ದು, ಹೆಚ್ಚಿನ ಮಾಹಿತಿಗೆ ತನಿಖೆ ಮುಂದುವರೆದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಂಶಿಕೃಷ್ಣ ಹೇಳಿದ್ರು.

ABOUT THE AUTHOR

...view details