ತುಮಕೂರು :ಕೌಟುಂಬಿಕ ಕಲಹ ಹಾಗೂ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ದಂಪತಿ ತಾವು ವಾಸವಿದ್ದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಾವಗಡ ತಾಲೂಕಿನ ರೊಪ್ಪ ಗ್ರಾಮದಲ್ಲಿ ನಡೆದಿದೆ. ಪತಿ ಮನು (26) ಹಾಗೂ ಪತ್ನಿ ಪವಿತ್ರ (24) ಮೃತರು.
ತುಮಕೂರು: ಮೂರು ವರ್ಷದ ಹಿಂದೆ ಮದುವೆಯಾಗಿದ್ದ ಯುವ ದಂಪತಿ ಆತ್ಮಹತ್ಯೆ - ETV Bharat Karnataka
ತುಮಕೂರಿನ ರೊಪ್ಪ ಗ್ರಾಮದಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
![ತುಮಕೂರು: ಮೂರು ವರ್ಷದ ಹಿಂದೆ ಮದುವೆಯಾಗಿದ್ದ ಯುವ ದಂಪತಿ ಆತ್ಮಹತ್ಯೆ ಪತಿ-ಪತ್ನಿ ಆತ್ಮಹತ್ಯೆಗೆ ಶರಣು](https://etvbharatimages.akamaized.net/etvbharat/prod-images/06-10-2023/1200-675-19697505-thumbnail-16x9-mh.jpg)
ಪತಿ-ಪತ್ನಿ ಆತ್ಮಹತ್ಯೆಗೆ ಶರಣು
Published : Oct 6, 2023, 4:35 PM IST
ಆತ್ಮಹತ್ಯೆಗೆ ಕುಟುಂಬದ ಆರ್ಥಿಕ ಸಂಕಷ್ಟ ಕಾರಣ ಎಂಬ ವಿಚಾರ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೂರು ವರ್ಷದ ಹಿಂದೆ ಮದುವೆಯಾಗಿದ್ದರು. ಎಂದಿನಂತೆ ಮನೆಯಿಂದ ಹೊರಬರದೇ ಇದ್ದಾಗ ಸ್ಥಳೀಯರು ಅನುಮಾನಿಸಿ ಬಾಗಿಲು ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಪಾವಗಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಶಿವಮೊಗ್ಗ: ಪತ್ನಿ ಅಗಲಿಕೆಯಿಂದ ಮನನೊಂದು ಹೆಡ್ಕಾನ್ಸ್ಟೇಬಲ್ ಆತ್ಮಹತ್ಯೆ