ತುಮಕೂರು/ಪಾವಗಡ:ಅನೈತಿಕ ಸಂಬಂಧಕ್ಕೆ ಒಪ್ಪದ ವಿವಾಹಿತ ಮಹಿಳೆ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿಹಚ್ಚಿ ಕೊಲೆ ಮಾಡಿದ ಘಟನೆ ತಾಲೂಕಿನ ಮುರರಾಯನ ಹಳ್ಳಿಯಲ್ಲಿ ನಡೆದಿದೆ.
ಮಹಿಳೆ 'ಅದಕ್ಕೆ' ನಿರಾಕರಿಸಿದಳು.. ಅಷ್ಟಕ್ಕೇ ಬೆಂಕಿ ಹಚ್ಚಿ ಕೊಲೆ ಮಾಡೋದಾ.. ಎಲಾ ಪಾಪಿ!
ಗೃಹಿಣಿಯೊಬ್ಬಳು ಅಕ್ರಮ ಸಂಬಂಧವನ್ನ ನಿರಾಕರಿಸಿದ್ದಕ್ಕೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ.
ಬೆಂಕಿ ಹಚ್ಚಿ ಗೃಹಿಣಿ ಕೊಲೆ
ಮುರರಾಯನ ಹಳ್ಳಿಯ ಸುಜಾತಾ ಕೊಲೆಯಾದ ಮಹಿಳೆ. ದೋಮ್ಮತ ಮರಿ ಗ್ರಾಮದ ಗಿರೀಶ್ ಬಾಬು ಕೊಲೆ ಮಾಡಿದ ಆರೋಪಿ. ಗಂಡ ಮನೆಯಲ್ಲಿ ಇಲ್ಲದ ಸಮಯದಲ್ಲಿ ಸುಜಾತಾ ಅವರ ಮನೆಗೆ ತೆರಳಿದ ಗಿರೀಶ್, ಅಕ್ರಮ ಸಂಬಂಧಕ್ಕೆ ಒತ್ತಾಯ ಮಾಡಿದ್ದಾನೆ. ಇದನ್ನು ವಿರೋಧಿಸಿದ ಸುಜಾತಾಳನ್ನು ಸೀಮೆ ಎಣ್ಣೆ ಸುರಿದು ಬೆಂಕಿ ಹಂಚಿ ಕೊಲೆ ಮಾಡಿದ್ದಾನೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪಿಎಸ್ಐ ರಾಘವೇಂದ್ರ ಅವರು ಪ್ರಕರಣ ದಾಖಲಿಸಿಕೊಂಡು ಆರೋಪಿ ಗಿರೀಶ್ ಬಾಬುನನ್ನು ಬಂಧಿಸಿದ್ದಾರೆ.