ತುಮಕೂರು:ಜಾನುವಾರುಗಳನ್ನು ಮೇಯಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದ ಬಾಲಕಿ ಹೆಜ್ಜೇನು ದಾಳಿಗೊಳಗಾಗಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗುಂಡಿನಪಾಳ್ಯದಲ್ಲಿ ನಡೆದಿದೆ.
ಬಾಲಕಿ ಮೇಲೆ ಹೆಜ್ಜೇನು ದಾಳಿ... ಆಸ್ಪತ್ರೆಗೆ ದಾಖಲು - Honey bee attacked girl at tumkuru
ಬಾಲಕಿ ಮೇಲೆ ಹೆಜ್ಜೇನು ದಾಳಿ ನಡೆಸಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗುಂಡಿನಪಾಳ್ಯದಲ್ಲಿ ನಡೆದಿದೆ.
ಬಾಲಕಿ ಮೇಲೆ ಹೆಜ್ಜೇನು ದಾಳಿ
ಗುಂಡಮ್ಮ ಹೆಜ್ಜೇನು ದಾಳಿಗೊಳಗಾದ ಬಾಲಕಿಯಾಗಿದ್ದು, ಗಾಯಗೊಂಡ ಬಾಲಕಿಗೆ ಕೊರಟಗೆರೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಜ್ಜೇನು ದಾಳಿಗೊಳಗಾದ ವಿಷಯ ಅರಣ್ಯ ಅಧಿಕಾರಿಗಳಿಗೆ ತಿಳಿಸಿದರೂ ಸ್ಥಳಕ್ಕೆ ಬಾರದ ಹಿನ್ನೆಲೆ ಸಾರ್ವಜನಿಕರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.