ಕರ್ನಾಟಕ

karnataka

ETV Bharat / state

ಸ್ಮಾರ್ಟ್​ ಸಿಟಿ ತುಮಕೂರಿನಲ್ಲಿ ಎಲ್ಲರ ಸೆಳೆಯುತ್ತಿದೆ ಹೈಟೆಕ್ ಬಸ್​ ನಿಲ್ದಾಣ

ತುಮಕೂರು ನಗರದಲ್ಲಿ ಒಟ್ಟು 13 ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿದ್ದು, ಪ್ರಾಯೋಗಿಕವಾಗಿ ತುಮಕೂರು ವಿವಿ ಎದುರು ಮೊದಲ ಬಸ್ ನಿಲ್ದಾಣ ಸಿದ್ಧವಾಗಿ ಸ್ವಾತಂತ್ರ್ಯ ದಿನಾಚರಣೆಯ ದಿನ ಉದ್ಘಾಟನೆಗೊಂಡಿದೆ.

ಸ್ಮಾರ್ಟ್​ ಸಿಟಿ ತುಮಕೂರಿನಲ್ಲಿ ಎಲ್ಲರ ಸೆಳೆಯುತ್ತಿದೆ ಹೈಟೆಕ್ ಬಸ್​ ನಿಲ್ದಾಣ

By

Published : Aug 18, 2019, 4:04 AM IST

ತುಮಕೂರು:ಸ್ಮಾರ್ಟ್ ಸಿಟಿಯಾಗಿ ಆಯ್ಕೆಯಾದ ನಂತರ ತುಮಕೂರು ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ, ಕೆಲವು ವೇಗವಾಗಿ ನಡೆದರೆ ಮತ್ತೆ ಕೆಲ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ ಇದರ ಮಧ್ಯೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸಿದ್ಧವಾಗಿರುವ ಹೈಟೆಕ್ ಬಸ್ ನಿಲ್ದಾಣ ಎಲ್ಲರನ್ನು ಸೆಳೆಯುತ್ತಿದೆ.

ಸ್ಮಾರ್ಟ್​ ಸಿಟಿ ತುಮಕೂರಿನಲ್ಲಿ ಎಲ್ಲರ ಸೆಳೆಯುತ್ತಿದೆ ಹೈಟೆಕ್ ಬಸ್​ ನಿಲ್ದಾಣ

ತುಮಕೂರು ವಿಶ್ವವಿದ್ಯಾನಿಲಯದ ಎದುರು ಸಿದ್ದವಾಗಿರುವ ಬಸ್ ನಿಲ್ದಾಣ ಈಗ ಎಲ್ಲರ ಆಕರ್ಷಣೆಯ ತಾಣ ಎನಿಸಿದೆ. ಈ ಬಸ್ ನಿಲ್ದಾಣದ ವಿಶೇಷತೆಯೆಂದರೆ ಪ್ರಯಾಣಿಕರಿಗೆ ಅಗತ್ಯವಾದ ವಸ್ತುಗಳು ಸಿಗಲಿವೆ, ಇನ್ನು ಪ್ರಯಾಣಿಕರಿಗೆ ವೈ-ಫೈ ಸೌಲಭ್ಯ ಸಹ ಕಲ್ಪಿಸಲಾಗಿದೆ. ಬಸ್‌ಗಳ ಮಾಹಿತಿ ಕೂಡ ಸಿಗಲಿದ್ದು, ನಗರದ ವಿವಿಧೆಡೆ ಯಾವ ಸಮಯದಲ್ಲಿ ಯಾವ ನಂಬರ್ ಬಸ್ ಬರಲಿದೆ, ಯಾವೆಲ್ಲಾ ಮಾರ್ಗವಾಗಿ ಚಲಿಸಲಿದೆ ಎಂಬುದನ್ನು ತಿಳಿಯಬಹುದು. ಜೊತೆಗೆ ನಿಲ್ದಾಣದ ಮೂಲಕ ಯಾವೆಲ್ಲಾ ನಗರಗಳಿಗೆ ಬಸ್​ಗಳು ಹೋಗಲಿವೆ ಎಂಬುದನ್ನು ಪ್ರಯಾಣಿಕರು ತಿಳಿಯಬಹುದಾಗಿದೆ.

ABOUT THE AUTHOR

...view details