ತುಮಕೂರು : ಭಾರೀ ಮಳೆಯಿಂದಾಗಿ ಹೇಮಾವತಿ ಕಾಲುವೆ ಮಳೆ ನೀರಿನ ರಭಸಕ್ಕೆ ಸಾಕಷ್ಟು ಹಾನಿಯಾಗಿದೆ. ಇದರಿಂದಾಗಿ ಹರಿಯುವ ನೀರಿನ ದಿಕ್ಕು ಬದಲಾಗುವ ತುಮಕೂರು ಜಿಲ್ಲೆಯ ರೈತರಿಗೆ ಆತಂಕ ಶುರುವಾಗಿದೆ.
ಚಿಕ್ಕನಾಯಕನಹಳ್ಳಿಗೆ ಹಾಸನ ಜಿಲ್ಲೆಯ ಗೋರೂರಿನ ಹೇಮಾವತಿ ಜಲಾಶಯದಿಂದ ಪ್ರತಿ ವರ್ಷ ನೀರು ಹರಿಸಲಾಗುತ್ತಿದೆ. ಈ ಬಾರಿ ಕಿಬ್ಬನಹಳ್ಳಿ ಸಮೀಪ ನಾಲೆ ಕುಸಿದಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.