ಕರ್ನಾಟಕ

karnataka

ETV Bharat / state

ಹೊಲಗದ್ದೆಗಳಿಗೆ ನುಗ್ಗಿದ ಹೇಮಾವತಿ ನೀರು: ರೈತರ ಆಕ್ರೋಶ

ಹಾಸನದ ಹೇಮಾವತಿ ಡ್ಯಾಮ್​ನಿಂದ ನಾಲೆಗಳಿಗೆ ಹರಿಸಲಾದ ನೀರು ರೈತರ ಜಮೀನುಗಳಿಗೆ ನುಗ್ಗಿದ್ದು, ತುಮಕೂರು ರೈತರು ಕಂಗಾಲಾಗಿದ್ದಾರೆ.

hemavathi dam water flows in crop land
ಹೊಲಗದ್ದೆಗಳಿಗೆ ನುಗ್ಗಿದ ಹೇಮಾವತಿ ನೀರು

By

Published : May 31, 2020, 3:04 PM IST

ತುಮಕೂರು:ಜಿಲ್ಲೆಗೆ ಹಾಸನದ ಹೇಮಾವತಿ ಜಲಾಶಯದಿಂದ ನಾಲೆಗಳ ಮೂಲಕ ನೀರು ಹರಿಸಲಾಗುತ್ತಿದ್ದು, ರೈತರ ಜಮೀನುಗಳಿಗೆ ನಾಲೆಯ ನೀರು ನುಗ್ಗಿದೆ.

ಹೊಲಗದ್ದೆಗಳಿಗೆ ನುಗ್ಗಿದ ಹೇಮಾವತಿ ನೀರು

ಕೆಲವೆಡೆ ಅವೈಜ್ಞಾನಿಕ ಕಾಮಗಾರಿ ಹಿನ್ನೆಲೆಯಲ್ಲಿ ಈ ರೀತಿ ನಾಲೆ ನೀರು ಜಮೀನಿಗೆ ನುಗ್ಗುತ್ತಿದೆ ಎನ್ನಲಾಗಿದೆ. ಗುಬ್ಬಿ ತಾಲೂಕಿನ ಅರವೇಸಂದ್ರ ಗ್ರಾಮದಲ್ಲಿ ಸುಮಾರು 3 ಎಕರೆ ಪ್ರದೇಶಕ್ಕೆ ಅಪಾರ ಪ್ರಮಾಣದ ಹೇಮಾವತಿ ನೀರು ನುಗ್ಗಿ ಬೆಳೆಗಳು ಸಂಪೂರ್ಣ ಜಲಾವೃತವಾಗಿವೆ. ರೇಣುಕಾರಾಧ್ಯ ಎಂಬುವರಿಗೆ ಸೇರಿದ 2 ಎಕರೆ ಪ್ರದೇಶದಲ್ಲಿ ಬೆಳೆದ ಬದನೆ ಮತ್ತು ಸೌತೆಕಾಯಿ ಬೆಳೆ ನೀರಿನಲ್ಲಿ ಕೊಳೆಯುವಂತಾಗಿದೆ.
ಬೆಳೆ ನಾಶವಾಗಿದ್ದರಿಂದ ನೊಂದಿರುವ ರೈತರು ಹೇಮಾವತಿ ನಾಲಾ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details