ಕರ್ನಾಟಕ

karnataka

ETV Bharat / state

ತುಮಕೂರಲ್ಲಿ ರಸ್ತೆ ಮೇಲೆಲ್ಲಾ ನೀರೋ ನೀರು; ವಾಹನ ಸವಾರರ ಪರದಾಟ - ಮಳೆ ಅಲರ್ಟ್​

ತುಮಕೂರು ನಗರದಾದ್ಯಂತ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿತ್ತು. ಮಾರುಕಟ್ಟೆ ಹತ್ತಿರದ ಅಂಡರ್‌ ಪಾಸ್ ಬ್ರಿಡ್ಜ್ ಬಳಿ ನೀರು ನಿಂತ ಪರಿಣಾಮ ವಾಹನ ಸವಾರರು ತೊಂದರೆ ಅನುಭವಿಸಿದರು.

heavy-rain-lashed-out-at-tumkur-city
ತುಮಕೂರಲ್ಲಿ ಮಳೆಯಾರ್ಭಟ

By

Published : Oct 12, 2021, 9:21 AM IST

ತುಮಕೂರು:ರಾತ್ರಿ ಸುರಿದ ಭಾರೀ ಮಳೆಗೆ ನಗರದ ಅನೇಕ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡಿದರು. ಸಂಜೆ ವೇಳೆ ಆರಂಭಗೊಂಡಿದ್ದ ಮಳೆ ಧಾರಾಕಾರವಾಗಿ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿತ್ತು.

ಮಧುಗಿರಿ ರಸ್ತೆಯ ಮಾರುಕಟ್ಟೆ ಹತ್ತಿರದ ಅಂಡರ್‌ ಪಾಸ್ ಬ್ರಿಡ್ಜ್ ಬಳಿ ನೀರು ನಿಂತು ವಾಹನ‌ ಸವಾರರಿಗೆ ತೊಂದರೆ ಉಂಟಾಯಿತು. ಈ ವೇಳೆ ನೀರಿನಲ್ಲಿ ಕೆಲವು ವಾಹನಗಳು ಕೆಟ್ಟುನಿಂತು ಅವಾಂತರ ಸೃಷ್ಟಿಯಾಗಿತ್ತು.

ರಸ್ತೆ ಮೇಲೆಲ್ಲಾ ನೀರೋ ನೀರು, ಪರದಾಡಿದ ವಾಹನ ಸವಾರರು

ಕೆಟ್ಟುನಿಂತ ವಾಹನಗಳನ್ನು ಸವಾರರು ನೀರಿನಲ್ಲಿ ತಳ್ಳಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹಲವೆಡೆ ಚರಂಡಿ ಕಟ್ಟಿಕೊಂಡಿದ್ದರಿಂದಾಗಿ ನೀರು ಉಕ್ಕಿ ಹರಿದು, ಸಂಚಾರಕ್ಕೆ ಅಡ್ಡಿಯಾಗಿತ್ತು.

ಇದನ್ನೂ ಓದಿ:Bengaluru Rain: ಏರ್​ಪೋರ್ಟ್​ ಟರ್ಮಿನಲ್ ಬಳಿ​ ನಿಂತ ನೀರು, ಸಂಚಾರಕ್ಕೆ ಅಡ್ಡಿ

ABOUT THE AUTHOR

...view details