ತುಮಕೂರು:ಜಿಲ್ಲೆಯಲ್ಲಿ ಕಳೆದ ಒಂದು ದಿನದ ಹಿಂದೆ ಸುರಿದ ಭಾರಿ ಮಳೆಯಿಂದ ಜನ ಜೀವನ ಅಸ್ಥವ್ಯಸ್ಥವಾಗಿದ್ದು, ಗ್ರಾಮದ ರಸ್ತೆಗಳು ಸಂಪರ್ಕ ಕಳೆದುಕೊಂಡಿರುವ ಘಟನೆ ನಡೆದಿದೆ.
ಬಾರಿ ಮಳೆಗೆ ಲಕ್ಕೇನಹಳ್ಳಿ ಬಳಕೆಗುಡ್ಲು ನಡುವಿನ ರಸ್ತೆ ಸಂಪರ್ಕ ಕಡಿತ.. - ಈಟಿವಿ ಭಾರತ ಕನ್ನಡ
ನಿರಂತರ ಮಳೆಯಿಂದಾಗಿ ಲಕ್ಕೇನಹಳ್ಳಿ ಬಳಕೆಗುಡ್ಲು ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಕೆಲ ಗ್ರಾಮಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ.
ಮಳೆಯಿಂದಾಗಿ ಜಲಾವೃತಗೊಂಡ ಸೇತುವೆ
ಮಳೆಯಿಂದಾಗಿ ಬೋರನಕಣಿವೆ ಜಲಾಶಯ ತುಂಬಿ ಹರಿಯುತ್ತಿರುವ ಹಿನ್ನಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಲಕ್ಕೇನಹಳ್ಳಿ ಬಳಕೆಗುಡ್ಲು ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಸ್ತೆ ಮೇಲೆ ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿದ್ದು, ಸವಾರರು ಪರದಾಡುವಂತಾಗಿದೆ. ಇನ್ನೂ ತುಮಕೂರು ತಾಲೂಕಿನ ಹೆಬ್ಬಾಕ ಕೆರೆ ಕೋಡಿ ಬಿದ್ದು, ಕೆರೆ ನೀರು ಹಂಚಿಹಳ್ಳಿ, ಹೆಬ್ಬಾಕ ಗ್ರಾಮಕ್ಕೆ ನೀರು ನುಗ್ಗಿದೆ.
ಇದನ್ನೂ ಓದಿ:ಪದವಿ ಕೋರ್ಸ್ ಬದಲಾವಣೆಗೆ ಹೆಚ್ಚುವರಿ ಶುಲ್ಕ, ಬಡ ವಿದ್ಯಾರ್ಥಿಗಳು ಕಂಗಾಲು