ತುಮಕೂರು: ತುಮಕೂರಿನಲ್ಲಿ ಕಳೆದ(ಶನಿವಾರ) ರಾತ್ರಿ ಧಾರಾಕಾರ ಮಳೆ ಸುರಿದಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಸಿದ್ದಗಂಗಾ ಮಠದ ಕಲ್ಯಾಣಿಯಲ್ಲಿ ನೀರು ಉಕ್ಕಿ ಹರಿದಿದೆ. ದಶಕದ ನಂತರ ಇಂತಹ ಮಳೆ ಕಂಡು ಶ್ರೀಮಠದಲ್ಲಿ ಭಕ್ತರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಭಾರಿ ಮಳೆ: ಸಿದ್ದಗಂಗಾ ಮಠದ ಕಲ್ಯಾಣಿಯಲ್ಲಿ ಉಕ್ಕಿ ಹರಿದ ನೀರು - rain problem
ತುಮಕೂರಿನಲ್ಲಿ ಶನಿವಾರ ರಾತ್ರಿ ಜೋರು ಮಳೆಯಾಗಿದ್ದು, ಬಹುತೇಕ ಪ್ರದೇಶಗಳಲ್ಲಿ ನೀರು ನಿಂತು ಸಮಸ್ಯೆ ಉಂಟಾಯಿತು.
![ತುಮಕೂರಿನಲ್ಲಿ ಭಾರಿ ಮಳೆ: ಸಿದ್ದಗಂಗಾ ಮಠದ ಕಲ್ಯಾಣಿಯಲ್ಲಿ ಉಕ್ಕಿ ಹರಿದ ನೀರು heavy rain in tumkur](https://etvbharatimages.akamaized.net/etvbharat/prod-images/768-512-15973957-thumbnail-3x2-news.jpg)
ತುಮಕೂರಿನಲ್ಲಿ ಮಳೆ
ನಿನ್ನೆ ರಾತ್ರಿ ನಗರದಲ್ಲಿ ಎಡಬಿಡದೆ ಮಳೆ ಸುರಿದು ತಗ್ಗು ಪ್ರದೇಶಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ. ಪರಿಣಾಮ ರಾತ್ರಿಯಿಡೀ ಜನರು ಪರದಾಡುವಂತಾಗಿತ್ತು. ಮನೆಗಳಿಗೂ ನೀರು ನುಗ್ಗಿದ್ದು ರಾತ್ರಿಯಿಡೀ ಮನೆಯಿಂದ ನೀರು ಹೊರ ಹಾಕುವ ಕೆಲಸದಲ್ಲಿ ನಿವಾಸಿಗಳು ನಿರತರಾಗಿದ್ದರು. ಅನೇಕ ಪ್ರದೇಶಗಳಲ್ಲಿ ಬೆಳಗಿನ ಜಾವದವರೆಗೂ ರಸ್ತೆಗಳು ಹಾಗೂ ಮನೆಗಳಲ್ಲಿ ನೀರು ನಿಂತಿತ್ತು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆ