ತುಮಕೂರು :ತುಮಕೂರು ಭಾಗಕ್ಕೆ ಹೊಂದಿಕೊಂಡಿರುವ ಆಂಧ್ರಪ್ರದೇಶ ಗಡಿಯ ಕೆಲ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಕೂಗುತ್ತಾ ಜನರಿಗೆ ಲಸಿಕೆ ನೀಡಲು ಮುಂದಾಗಿದ್ದಾರೆ.
ಪಾವಗಡ ಹಾಗೂ ಚಿಕ್ಕಬಳ್ಳಾಪುರ ತಾಲೂಕುಗಳಿಗೆ ಹೊಂದಿಕೊಂಡಂತೆ ಇರುವ ಆಂಧ್ರಪ್ರದೇಶದ ಕೆಲ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮೊದಲ ಹಾಗೂ 2ನೇ ಡೋಸ್ ಹಾಕಿಸಿಕೊಳ್ಳಿ ಎಂದು ಕೂಗುತ್ತಾ ಹಳ್ಳಿಯ ರಸ್ತೆಗಳಲ್ಲಿ ಸಂಚರಿಸುತ್ತಿದ್ದಾರೆ.