ಕರ್ನಾಟಕ

karnataka

ETV Bharat / state

ಒಮಿಕ್ರಾನ್ ಬರದಂತೆ ಔಷಧ ಕೊಡುತ್ತೇನೆ ಎಂದು ವಂಚನೆ: ನಕಲಿ ಕ್ಲಿನಿಕ್ ಮೇಲೆ ದಾಳಿ - ನಕಲಿ ಕ್ಲಿನಿಕ್ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳ ದಾಳಿ

ಸಣ್ಣ ಜ್ವರಕ್ಕೂ ಓಮಿಕ್ರಾನ್ ಲಕ್ಷಣ ಎಂದು ಹೆದರಿಸುತಿದ್ದ ನಕಲಿ ವೈದ್ಯ ಸಾದತ್ ಕ್ಲಿನಿಕ್​ ಮೇಲೆ ಡಿಹೆಚ್​ಒ ಡಾ.ನಾಗೇಂದ್ರಪ್ಪ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ನಕಲಿ ವೈದ್ಯ ಸಾದತ್ ಪರಾರಿಯಾಗಿದ್ದಾನೆ.

ನಕಲಿ ಕ್ಲಿನಿಕ್ ಮೇಲೆ ದಾಳಿ
ನಕಲಿ ಕ್ಲಿನಿಕ್ ಮೇಲೆ ದಾಳಿ

By

Published : Dec 21, 2021, 9:38 PM IST

ತುಮಕೂರು : ಓಮಿಕ್ರಾನ್ ಬರದಂತೆ ಔಷಧ ಕೊಡುತ್ತೇನೆ ಎಂದು ವಂಚಿಸುತಿದ್ದ ನಕಲಿ ಕ್ಲಿನಿಕ್ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರೋ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನ ದಸೂಡಿ ಗ್ರಾಮದಲ್ಲಿ ನಡೆದಿದೆ.

ನಕಲಿ ಕ್ಲಿನಿಕ್ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳ ದಾಳಿ

ಸಣ್ಣ ಜ್ವರಕ್ಕೂ ಓಮಿಕ್ರಾನ್ ಲಕ್ಷಣ ಎಂದು ನಕಲಿ ವೈದ್ಯ ಸಾದತ್ ಹೆದರಿಸುತ್ತಿದ್ದನು ಎಂಬ ಆರೋಪ ಕೇಳಿ ಬಂದಿದೆ. ಬಿ ಫಾರ್ಮಾ ಮಾಡಿಕೊಂಡಿದ್ದ ಸಾದತ್ ತಾನು ಎಂಎಸ್ ಮಾಡಿದ್ದೆನೆಂದು ಸುಳ್ಳು ಹೇಳಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದನಂತೆ.

ಖಲಂದರಿಯಾ ಮೆಡಿಕಲ್ ಎಂದು ಹೆಸರಿಟ್ಟುಕೊಂಡು ರೋಗಿಗಳಿಗೆ ಸಾದತ್ ಚಿಕಿತ್ಸೆ ನೀಡುತಿದ್ದನು. ಡಿಹೆಚ್ಒ ಡಾ:ನಾಗೇಂದ್ರಪ್ಪ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ದಾಳಿ ನಡೆಸಿದ್ದು, ದಾಳಿ ನಡೆಯುತಿದ್ದಂತೆ ಸಾದತ್ ಪರಾರಿಯಾಗಿದ್ದಾನೆ.

ಇದನ್ನೂ ಓದಿ : ಮದ್ಯ ಕುಡಿಸಿ ಅಶ್ಲೀಲ ಫೋಟೋ, ವಿಡಿಯೋ ತೆಗೆದು ಬ್ಲಾಕ್​ ಮೇಲ್​: ಯುವತಿ ವಿರುದ್ಧ ಯುವಕನ ದೂರು..!

ABOUT THE AUTHOR

...view details