ತುಮಕೂರು: ಇಲ್ಲಿನ ಮಾವಿನಕುಂಟೆ ಗ್ರಾಮದಲ್ಲಿದ್ದ ಕೆಎಸ್ಆರ್ಟಿಸಿ ಚಾಲಕನಿಗೆ ಈಗಾಗಲೇ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಗ್ರಾಮವನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.
ತುಮಕೂರಿನ ಸೀಲ್ ಡೌನ್ ಪ್ರದೇಶದಲ್ಲಿ ನಿರಂತರ ಆರೋಗ್ಯ ತಪಾಸಣೆ - Corona
ತುಮಕೂರು ಜಿಲ್ಲೆಯ ಮಾವಿನಕುಂಟೆ ಗ್ರಾಮವನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದ್ದು, ಸರ್ವೆ ಮಾಡುವ ಮೂಲಕ ಆಶಾ ಕಾರ್ಯಕರ್ತೆಯರು ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ.
ತುಮಕೂರಿನ ಸೀಲ್ಡೌನ್ ಪ್ರದೇಶದಲ್ಲಿ ನಿರಂತರ ಆರೋಗ್ಯ ತಪಾಸಣೆ
ಸೀಲ್ ಡೌನ್ ಮಾಡಿರುವ ಪ್ರದೇಶದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಮನೆ ಮನೆಗೂ ಸರ್ವೆ ಮಾಡುವ ಮೂಲಕ ಆಶಾ ಕಾರ್ಯಕರ್ತೆಯರು ತಪಾಸಣೆ ಮಾಡುತ್ತಿದ್ದಾರೆ.
ಮಂಗಳವಾರ ಮಾವಿನಕುಂಟೆ ಗ್ರಾಮದಲ್ಲಿ ಚಾಲಕನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಹೀಗಾಗಿ ಗ್ರಾಮದ ನಾಲ್ಕು ಕಡೆ ರಸ್ತೆಗಳನ್ನು ಬಂದ್ ಮಾಡಲಾಗಿದ್ದು, ಇಡೀ ಗ್ರಾಮವೇ ಸ್ತಬ್ಧವಾಗಿದೆ. ಆತಂಕದಲ್ಲಿರುವ ಗ್ರಾಮಸ್ಥರನ್ನು ಥರ್ಮಲ್ ಸ್ಕ್ರೀನಿಂಗ್ ಮೂಲಕ ಆರೋಗ್ಯ ಪರೀಕ್ಷಿಸಲಾಗುತ್ತಿದೆ.