ತುಮಕೂರು: ರಾಮನಗರ ಜಿಲ್ಲೆಯಲ್ಲಿರುವ ರಾಮದೇವರ ಬೆಟ್ಟಕ್ಕೆ ಯುಪಿ ಸಿಎಂ ಕರೆತಂದು ರಾಮ ಮಂದಿರ ನಿರ್ಮಾಣಕ್ಕೆ ಫೌಂಡೇಶನ್ ಹಾಕುವ ಅವಶ್ಯಕತೆ ಇಲ್ಲ. ನಮ್ಮ ಸುತ್ತೂರು ಮಠಾಧೀಶರನ್ನು ಮತ್ತು ಆದಿಚುಂಚನಗಿರಿ ಶ್ರೀಗಳನ್ನು ಕರೆತಂದು ನಾನೇ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.
ಜೆಡಿಎಸ್ ಪಂಚರತ್ನ ರಥಯಾತ್ರೆಯು ಚಿಕ್ಕನಾಯಕನಹಳ್ಳಿ ತಾಲೂಕಿನ ಬೆಂಚೆ ಗ್ರಾಮ ತಲುಪಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇವರದ್ದೇ ಸರ್ಕಾರವಿದೆ. ಮೂರುವರೆ ವರ್ಷದಿಂದ ರಾಮ ಮಂದಿರ ನಿರ್ಮಾಣ ಮಾಡದೇ ಇದ್ದವರು ಇವಾಗ ಯಾಕೆ ದಕ್ಷಿಣ ಭಾರತದಲ್ಲಿ ನಿರ್ಮಾಣ ಮಾಡ್ತಿವಿ ಎಂದು ಘೋಷಣೆ ಮಾಡ್ತಾರೆ?. ಐದು ವರ್ಷ ಸರ್ಕಾರವಿದ್ದಾಗ ಮಾಡಬಹುದಿತ್ತಾಲ್ವಾ?. ಬಿಜೆಪಿಯವರನ್ನು ಜನ ರಾಜ್ಯದಿಂದ ಹೊರಗೆ ಇಡೋ ಪ್ರಯತ್ನ ಮಾಡುತ್ತಿದ್ದಾರೆ. ಮುಂದಿನ ಮೂರು ತಿಂಗಳಲ್ಲಿ ಚುನಾವಣೆ ಬರ್ತಾ ಇದೆ. ಇದೆಲ್ಲಾ ಚುನಾವಣೆಗೋಸ್ಕರ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಅಯೋಧ್ಯಾ ರಾಮ ಮಂದಿರದ ತಳಪಾಯಕ್ಕೆ ದೇವನಹಳ್ಳಿಯ ಸಾದಹಳ್ಳಿಯಿಂದ ಕಲ್ಲು