ಕರ್ನಾಟಕ

karnataka

By

Published : May 5, 2023, 7:17 AM IST

ETV Bharat / state

ರಾಜ್ಯದಲ್ಲಿ ನಮ್ಮ ಸರ್ಕಾರ ರಚನೆ, ಎಲ್ಲರಿಗೂ ಗೌರವ: ಹೆಚ್‌ಡಿಕೆ

ಹೆಚ್‌.ಡಿ ಕುಮಾರಸ್ವಾಮಿ ಅವರು ತುಮಕೂರಿನ ಶಿರಾದಲ್ಲಿ ಮತ ಪ್ರಚಾರ ನಡೆಸಿದರು.

Hd Kumaraswamy
ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ

ಮಾಜಿ ಸಿಎಂ ಹೆಚ್​ಡಿಕೆ ಮತಪ್ರಚಾರ

ತುಮಕೂರು:ರಾಜ್ಯದಲ್ಲಿ ಜನತಾ ದಳ ಸರ್ಕಾರ ಅಧಿಕಾರಕ್ಕೆ ಬರುವುದನ್ನು ತಡೆಯಲು ಬಿಜೆಪಿ ಹಾಗೂ ಕಾಂಗ್ರೆಸ್​ನಿಂದ ಸಾಧ್ಯವಿಲ್ಲ. ನಮ್ಮ ಸರ್ಕಾರ ರಚನೆಯಾಗುತ್ತದೆ. ಎಲ್ಲರನ್ನೂ ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​​.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. ತುಮಕೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಉಗ್ರೇಶ್ ಪರವಾಗಿ ನಡೆದ ಪ್ರಚಾರ ಕಾರ್ಯದಲ್ಲಿ ಅವರು ಮಾತನಾಡಿದರು.

ಶಿರಾ ತಾಲೂಕಿಗೆ ಹಲವು ಬಾರಿ ಬಂದಿದ್ದೇನೆ. ಪಂಚರತ್ನ ಯೋಜನೆ ಜಾರಿಗೆ ತರಲು ನೂರಾರು ಕ್ಷೇತ್ರಗಳಿಗೆ ಭೇಟಿ ಕೊಟ್ಟಿದ್ದೇನೆ. ಶಿರಾ ಕ್ಷೇತ್ರದಲ್ಲಿ ರಾತ್ರಿ 2 ಗಂಟೆವರೆಗೂ ಸಂಚಾರ ನಡೆಸಿದ್ದೇನೆ ಎಂದರು.

ಪಂಚರತ್ನ ಕಾರ್ಯಕ್ರಮಗಳು ರಾಜ್ಯದ ಎಲ್ಲ ಕುಟುಂಬಗಳಿಗೂ ಅನುಕೂಲವಾಗಲಿದೆ. ಮುಸ್ಲಿಮರಿಗೆ ನೀಡಿರುವ ಶೇ.4 ರಷ್ಟು ಮೀಸಲಾತಿ ಮುಂದುವರೆಯಲಿದೆ. ರೈತರನ್ನು ಸಾಲದಿಂದ ವಿಮುಕ್ತಿಗೊಳಿಸುತ್ತೇನೆ. ರಾಜ್ಯದಲ್ಲಿ ಎರಡು ಬಾರಿ ಸಿಎಂ ಆದಾಗಲೂ ಸಾಲ ಮನ್ನಾ ಮಾಡಿದ್ದೇನೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಗೆ ಸಹಾಯಧನ, ಭೂರಹಿತ ಕುಟುಂಬಕ್ಕೆ ಪ್ರತಿ ತಿಂಗಳು 2 ಸಾವಿರ ರೂ., ಸ್ತ್ರೀ ಶಕ್ತಿ ಸಹಾಯ ಗುಂಪುಗಳ ಸಾಲ ಮನ್ನಾ, 45 ವರ್ಷ ಮೇಲ್ಪಟ್ಟವರಿಗೆ ತಿಂಗಳಿಗೆ 5 ಸಾವಿರ ರೂ.ಸಹಾಯಧನ, ವಿಧವೆಯರಿಗೆ ಹಾಗೂ ಮದುವೆಯಾಗದ ಕನ್ಯೆಯರಿಗೆ 2 ಸಾವಿರ ರೂ. ವರ್ಷಕ್ಕೆ 5 ಗ್ಯಾಸ್ ಸಿಲಿಂಡರ್, ಯುವಕರಿಗೆ ಪ್ರತಿ ಜಿಲ್ಲೆಯಲ್ಲಿ 1 ಲಕ್ಷ ಉದ್ಯೋಗ ಸೃಷ್ಟಿ ಹಾಗೂ ಪದವಿ ಓದುವ ಹೆಣ್ಣು ಮಕ್ಕಳಿಗೆ ಎಲೆಕ್ಟ್ರಿಕ್ ಸ್ಕೂಟಿ ನೀಡುವುದಾಗಿ ಹೆಚ್​ಡಿಕೆ ಭರವಸೆ ನೀಡಿದರು.

ಇದನ್ನೂ ಓದಿ:ಅಮಾಯಕ ಯುವಕರನ್ನು ಬಜರಂಗದಳಕ್ಕೆ ಸೇರಿಸಿ ಅವರ ದಿಕ್ಕು ತಪ್ಪಿಸುವ ಮೂಲ ಹುಡುಕಬೇಕು : ಹೆಚ್‌ಡಿಕೆ

'ಸ್ವರ್ಣ ಕುಟೀರ' ಯೋಜನೆ:ಕಾಡುಗೊಲ್ಲ ಸಮುದಾಯದ ಮನೆಯಲ್ಲಿ ವಾಸ್ತವ್ಯ ಹೂಡಿದ್ದೇನೆ. ಅವರಿಗಾಗಿ 'ಸ್ವರ್ಣ ಕುಟೀರ'ಯೋಜನೆ ತರುತ್ತೇನೆ. ಸಮಯದ ಅಭಾವದಿಂದ ಮತ್ತೆ ಶಿರಾಕ್ಕೆ ಬರಲು ಸಾಧ್ಯವಿಲ್ಲ. ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ಬಡವರ ಬದುಕು ಹಸನುಗೊಳಿಸಲು ಹೋರಾಟ ಮಾಡುತ್ತಿದ್ದೇನೆ. ಶಿರಾ ಅಭ್ಯರ್ಥಿ ಉಗ್ರೇಶ್ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಕುರಿಮರಿ ಗಿಫ್ಟ್‌: ಕುಮಾರಸ್ವಾಮಿ ಅವರನ್ನು ವಿಶೇಷವಾಗಿ ಸ್ವಾಗತಿಸಿದ ಕಾರ್ಯಕರ್ತರು ಕಂಬಳಿ ಹೊದಿಸಿ ಕುರಿಮರಿ ಉಡುಗೊರೆ ನೀಡಿದರು.

ಗುರುವಾರ ದಾವಣಗೆರೆ ಜಿಲ್ಲೆಯ ಮಾಯಕೊಂಡ ಕ್ಷೇತ್ರದ ಜೆಡಿಎಸ್​​ ಅಭ್ಯರ್ಥಿ ಪರ ಕುಮಾರಸ್ವಾಮಿ ಮತಯಾಚಿಸಿದರು. ಈ ವೇಳೆ ಮಾತನಾಡಿ, ಬಿಜೆಪಿ ರೈತ ವಿರೋಧಿ ಸರ್ಕಾರ. ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆ ಮಾಡಿದೆ. ಸಿಲಿಂಡರ್ ಬೆಲೆ ಗಗನಕ್ಕೇರಿದೆ. ನಮ್ಮ ಸರ್ಕಾರ ರಚನೆ ಆದರೆ ಪ್ರತಿ ವರ್ಷ ಐದು ಸಿಲಿಂಡರ್ ಉಚಿತವಾಗಿ ನೀಡುತ್ತೇವೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ:ಬಿಜೆಪಿ ಸರ್ಕಾರ ರೈತ ವಿರೋಧಿ ಸರ್ಕಾರ: ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ

ABOUT THE AUTHOR

...view details