ತುಮಕೂರು:ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಳೆದ ಮೂರು ವರ್ಷದಿಂದ ಮೈತ್ರಿ ಇದೆ, ಇದೇನೂ ಹೊಸದಲ್ಲ. ಇದರಲ್ಲಿ ಯಾರು ಹೆಚ್ಚು ಯಾರು ಕಡಿಮೆ ಅಂತ ಏನೂ ಇಲ್ಲ. ಇದರ ಬದಲಾಗಿ ಎರಡು ಪಕ್ಷಗಳಿಗೂ ಒಂದು ಕಮಿಟ್ಮೆಂಟ್ ಇದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ರಾಜಕೀಯವಾಗಿ, ಸಾಮಾಜಿಕವಾಗಿ ಹಿಂದುಳಿದ ಸಮುದಾಯದವರನ್ನು ಮೇಲೆತ್ತುವ ಸಲುವಾಗಿ ಮೈತ್ರಿ ಮಾಡಿಕೊಳ್ಳಲಾಗಿದೆ. ಸದ್ಯ ಮೈತ್ರಿಯಾಗಿದೆ ಎಂದು ಅವರು ಹೇಳಿದರು.
ಎಚ್ ಡಿ ದೇವೇಗೌಡ ಪ್ರತಿಕ್ರಿಯೆ ಎರಡು ವರ್ಷದ ಹಿಂದೆ ಕಾಂಗ್ರೆಸ್ 18, ಜೆಡಿಎಸ್ 25, ಬಿಜೆಪಿ 26 ಸದಸ್ಯತ್ವ ಬಲವಿತ್ತು. ಒಬ್ಬ ಪಕ್ಷೇತರ ಸೇರಿಸಿದರು. ಆಗ ಕಾಂಗ್ರೆಸ್ 19 ಆಯ್ತು, ನಾನು ಇದನ್ನೆಲ್ಲಾ ಸೂಕ್ಷ್ಮ ವಾಗಿ ಗಮನಿಸುತ್ತಿದ್ದೆ ಎಂದರು.
ಕುಮಾರಸ್ವಾಮಿ ನಿನ್ನೆಯಿಂದಲೂ ಅಲ್ಲೇ ಇದ್ದಾರೆ. ಕೊನೆಗೆ ನಮಗೆ ಮೇಯರ್ ಸ್ಥಾನವನ್ನ ಕಾಂಗ್ರೆಸ್ ಬಿಟ್ಟಿದೆ. ಅವರು ಉಪಮೇಯರ್ ತೆಗೆದುಕೊಂಡಿದ್ದಾರೆ. ಮೊದಲ ಮೇಯರ್ ಚುನಾವಣೆಯಿಂದಲೂ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮುಂದುವರೆದಿತ್ತು ಎಂದು ತಿಳಿಸಿದರು.