ತುಮಕೂರು:ಕೆನಡಾದಲ್ಲಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿರುವ ಚಂದ್ರ ಆರ್ಯ, ಕೆನಾಡದ ಟೊರೆಂಟೋದಲ್ಲಿ ಹಿಂದೂ ದೇವಾಲಯಗಳ ಮೇಲೆ ನಡೆದ ದಾಳಿಯನ್ನು ಖಂಡಿಸಿದ್ದಾರೆ.
ಚಂದ್ರ ಆರ್ಯ ತುಮಕೂರು ಜಿಲ್ಲೆ ಶಿರಾ ತಾಲೂಕಿನ ದ್ವಾರಾಳು ಗ್ರಾಮದ ಮೂಲದವರು. ಕೆನಡಾ ಸಂಸತ್ನಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿ ವಿಷಯ ಪ್ರಸ್ತಾಪಿಸಿ ತೀವ್ರವಾಗಿ ಖಂಡಿಸಿದ್ದಾರೆ. ಟೊರೆಂಟೋದ ಸ್ವಾಮಿ ನಾರಾಯಣ, ವಿಷ್ಣು ಮಂದಿರಗಳ ಮೇಲೆ ಕೆಲ ಕಿಡಿಗೇಡಿಗಳು ದಾಳಿ ಮಾಡಿದ್ದಾರೆ. ಭಾರತ ಸೇರಿದಂತೆ ದಕ್ಷಿಣ ಏಷ್ಯಾದಿಂದ ಸಾಕಷ್ಟು ಹಿಂದೂಗಳು ಕೆನಡಾಗೆ ಆಗಮಿಸಿದ್ದಾರೆ. ಭಾರತೀಯ ಮೂಲದ ಹಿಂದೂಗಳು ಶಾಂತಿಪ್ರಿಯರು ಹಾಗೂ ಶ್ರಮ ಜೀವಿಗಳು. ತಮ್ಮ ಮಕ್ಕಳ ಶಿಕ್ಷಣ ಸೇರಿದಂತೆ ಕುಟುಂಬದ ಉನ್ನತಿಗೆ ಶ್ರಮಿಸುತ್ತಾರೆ ಎಂದು ಹೇಳಿದರು.