ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನ ವೀರಣ್ಣ ಗುಡಿ ಗ್ರಾಮದಲ್ಲಿರುವ ಐತಿಹಾಸಿಕ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಬ್ರಹ್ಮ ರಥೋತ್ಸವ ನೂರಾರು ಮಂದಿ ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ವಿಜೃಂಭಣೆಯಿಂದ ನೆರವೇರಿದ ವೀರಭದ್ರೇಶ್ವರ ಬ್ರಹ್ಮ ರಥೋತ್ಸವ - Tumakuru
ಗುಬ್ಬಿ ತಾಲ್ಲೂಕಿನ ವೀರಣ್ಣನ ಗುಡಿಯಲ್ಲಿ ಹಲವು ದಶಕಗಳಿಂದಲೂ ಶ್ರೀ ವೀರಭದ್ರೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ನಡೆಯುತ್ತಿದೇ. ಮುಂಜಾನೆಯಿಂದಲೂ ಕೂಡ ಸಾಕಷ್ಟು ಧಾರ್ಮಿಕ ವಿಧಿವಿಧಾನಗಳು ನಡೆದವು. ಹಲವು ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಜಾತ್ರೆಯೂ ಬಹಳ ಅದ್ಧೂರಿಯಾಗಿ ನಡೆಯಿತು.

ಗುಬ್ಬಿ ತಾಲ್ಲೂಕಿನ ವೀರಣ್ಣನ ಗುಡಿಯಲ್ಲಿ ಹಲವು ದಶಕಗಳಿಂದಲೂ ಶ್ರೀ ವೀರಭದ್ರೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ನಡೆಯುತ್ತಿದೆ. ಮುಂಜಾನೆಯಿಂದಲೂ ಕೂಡ ಸಾಕಷ್ಟು ಧಾರ್ಮಿಕ ವಿಧಿವಿಧಾನಗಳು ನಡೆದವು. ಹಲವು ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಜಾತ್ರೆಯೂ ಬಹಳ ಅದ್ಧೂರಿಯಾಗಿ ನಡೆಯಿತು. ಜಾತ್ರೆಗೆ ಆಗಮಿಸಿದ್ದ ಭಕ್ತರಿಗೆ ಪ್ರಸಾದ ಸೇವೆಯನ್ನು ಮಾಡಲಾಗಿತ್ತು.
ರಣ ಬಿಸಿಲಿನಲ್ಲಿಯೂ ಕೂಡ ಸಾವಿರಾರು ಭಕ್ತರು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು. ತೇರನ್ನು ಎಳೆಯುವಾಗ ಬಾಳೆಹಣ್ಣು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ರಾಜ್ಯದ ವಿವಿಧ ಭಾಗಗಳಿಂದ ರಥೋತ್ಸವದಲ್ಲಿ ಭಕ್ತರು ಆಗಮಿಸಿದ್ದು ವಿಶೇಷವಾಗಿತ್ತು.
TAGGED:
Tumakuru