ಕರ್ನಾಟಕ

karnataka

ETV Bharat / state

ಎಲ್ಲೋ ಮಾತಾಡೋದಲ್ಲ, ತಾಕತ್ತಿದ್ರೆ ನಮ್ಮ ಕ್ಷೇತ್ರಕ್ಕೆ ಬಂದು ಗೆಲ್ಲಿ: ಹೆಚ್​ಡಿಕೆಗೆ ಶ್ರೀನಿವಾಸ್​ ಬೆಂಬಲಿಗರ ಸವಾಲು - ಕುಮಾರಸ್ವಾಮಿಗೆ ಶ್ರೀನಿವಾಸ್​ ಬೆಂಬಲಿಗರ ಸವಾಲು

ನಿಮ್ಮ ಜೆಡಿಎಸ್ ಶಕ್ತಿ ಏನು ಅನ್ನೋದನ್ನು ತೊರಿಸಿ. ಅದನ್ನ ಬಿಟ್ಟು ಕೈಲಾಗದವರು ಅದೇನೋ ಬಿಟ್ಕೊಂಡ್ರಲ್ಲ ಹಂಗೆ ಎಲ್ಲೋ ಕುತ್ಕಂಡು ಮಾತಾಡೋದಲ್ಲ. ಬನ್ನಿ ಕ್ಷೇತ್ರಕ್ಕೆ ವಾಸಣ್ಣನ ಬಗ್ಗೆ ಕೇಳಿ. ಮಾಜಿ ಸಿಎಂ‌ ನೀವು, ಆ ಘನತೆಗೆ ತಕ್ಕ ಹಾಗೆ ನೀವು ರಾಜಕೀಯ ‌ಮಾಡಿ. ತಾಕತ್ ಇದ್ರೆ ನಮ್ಮ ಕ್ಷೇತ್ರಕ್ಕೆ ಬಂದು ಗೆದ್ದು ತೋರ್ಸಿ ಎಂದು ಗುಬ್ಬಿ ಶಾಸಕ ಶ್ರೀನಿವಾಸ್ ಬೆಂಬಲಿಗರು ಸಹ ಮಾಜಿ ಸಿಎಂ ಹೆಚ್​ಡಿಕೆ ಸವಾಲೆಸೆದಿದ್ದಾರೆ.

gubbi-mla-srinivas-supporters-challenges-to-hd-kumaraswamy
ಹೆಚ್​ಡಿಕೆಗೆ ಶ್ರೀನಿವಾಸ್​ ಬೆಂಬಲಿಗರ ಸವಾಲು

By

Published : Jun 12, 2022, 7:46 PM IST

ತುಮಕೂರು:ಗುಬ್ಬಿ ಶಾಸಕ ಶ್ರೀನಿವಾಸ್ ಮನೆ ಮುಂದೆ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಗೆ ಶಾಸಕರ ಬೆಂಬಲಿಗರು ನೇರ ಸವಾಲು ಹಾಕಿರುವ ವಿಡಿಯೋಗಳೂ ಕೂಡ ವೈರಲ್​ ಆಗಿವೆ.

ಪ್ರತಿಭಟನೆ ಬೆನ್ನಲ್ಲೇ ಈ ವಿಡಿಯೋ ಮಾಡಲಾಗಿದೆ ಎನ್ನಲಾಗಿದ್ದು, ನಾಲ್ಕಾರು ಮಂದಿ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. 'ನಿಮಗೆ ತಾಕತ್ತಿದ್ದರೆ ನೇರವಾಗಿ ಗುಬ್ಬಿಗೆ ಬಂದು ಚುನಾವಣೆಗೆ ಸ್ಪರ್ಧಿಸಿ ಗೆಲ್ಲಿ. ನಿಮ್ಮ ಜೆಡಿಎಸ್ ಶಕ್ತಿ ಏನು ಎಂಬುದನ್ನು ತೋರಿಸಿ. ಅದನ್ನ ಬಿಟ್ಟು ಕೈಲಾಗದವರು ಅದೇನೋ ಬಿಟ್ಕೊಂಡ್ರಲ್ಲ ಹಾಗೆ ಎಲ್ಲೋ ಕುಳಿತುಕೊಂಡು ಮಾತಾಡೋದಲ್ಲ. ಬನ್ನಿ ಕ್ಷೇತ್ರಕ್ಕೆ ವಾಸಣ್ಣನ ಬಗ್ಗೆ ಕೇಳಿ. ಮಾಜಿ ಸಿಎಂ‌ ನೀವು, ಆ ಘನತೆಗೆ ತಕ್ಕಂತೆ ನೀವು ರಾಜಕೀಯ ‌ಮಾಡಿ' ಎಂದಿದ್ದಾರೆ.

ಹೆಚ್​ಡಿಕೆಗೆ ಶ್ರೀನಿವಾಸ್​ ಬೆಂಬಲಿಗರ ಸವಾಲು

ಅಲ್ಲದೆ, ಎಸ್.ಆರ್ ಶ್ರೀನಿವಾಸ್ ಗುಬ್ಬಿ ಎಂಎಲ್ಎ ಎಂಬ ಫೇಸ್​ಬುಕ್​ ಪೇಜ್​ನಲ್ಲಿ ನೇರವಾಗಿ ಕುಮಾರಸ್ವಾಮಿಗೆ ಸವಾಲೆಸೆದಿರುವ ಶ್ರೀನಿವಾಸ್ ಬೆಂಬಲಿಗರು, ನಾವು ಗುಬ್ಬಿ ವಾಸಣ್ಞನ‌ ಹುಡುಗರು, ಕಾರ್ಯಕರ್ತರು. ನೀವು ಎಷ್ಟೇ ಹೇಳಿದ್ರು ಶಕ್ತಿಯುತವಾಗಿ ವಾಸಣ್ಣ ಬೆಳೆಯುತ್ತಾರೆ, ಬೆಳೆಸುತ್ತೇವೆ. ನೀವಾಗಿ ನೀವೇ ನಮ್ಮ‌ ವಾಸಣ್ಣನನ್ನು ಸ್ಟೇಟ್ ಲೀಡರ್ ಮಾಡಿದಿರಿ. ಅವರಿಗೆ ನಿಮ್ಮ ಆಶೀರ್ವಾದ ಇರುತ್ತೆ. ಅವರನ್ನು ನಾವು ಕೈಹಿಡಿದು ಉನ್ನತ ಸ್ಥಾನಗಳಿಗೆ ಕರೆದುಕೊಂಡು ಹೊಗ್ತೀವಿ ಎಂದು ಹೇಳಿದ್ದಾರೆ.

ಯಾರು ಏನೇ ಹೇಳಿದರೂ ನಾವು ಯಾವತ್ತೂ ವಾಸಣ್ಣನನ್ನ ಬಿಟ್ಟುಕೊಡಲ್ಲ. ಇಂತಹ ರಾಜಕಾರಣಕ್ಕೆ ನಾವು ಬಗ್ಗುವರಲ್ಲ. ಗುಬ್ಬಿ ಜನ, ಯಾವತ್ತೂ ವಾಸಣ್ಣನನ್ನ ಕೈಬಿಟ್ಟಿಲ್ಲ, ಬಿಡುವುದೂ ಇಲ್ಲ. ನಿಮ್ಮಂತಹ ಎಷ್ಟೇ ಕುಮಾರಸ್ವಾಮಿಗಳು ಬಂದರೂ ಅಷ್ಟೇ, ಯಾವನ್ ಬಂದ್ರು ಅಷ್ಟೇ. ವಾಸಣ್ಣನಿಗೆ ಯಾರೂ ಸರಿಸಾಟಿ ಇಲ್ಲ. ಈ ತರ ರಾಜಕೀಯ ‌ಮಾಡಿದರೆ ಸರಿ ಇರಲ್ಲ.‌ ನಾವು‌ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ, ನಿಮಗೆ ಎಚ್ಚರಿಕೆ‌ ಕೊಡುತ್ತಿದ್ದೇವೆ ಕುಮಾರಸ್ವಾಮಿ ಅವರೇ.. ನಿಮ್ಮ‌ ಬಳಿ ಇರುವ ಕಾರ್ಯಕರ್ತರು ದುಡ್ಡು ಕೊಟ್ಟರೆ ಬರಬಹುದು ಅಷ್ಟೇ., ಆದ್ರೆ ನಾವ್​ ಹಾಗಲ್ಲ ಎಂದು ಹೆಚ್​ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶಾಸಕರ ಬೆಂಬಲಿಗರಿಂದ ಪ್ರತಿಭಟನೆ

ಬೆಂಬಲಿಗರಿಂದ ಪ್ರತಿಭಟನೆ:ಗುಬ್ಬಿ ತಾಲೂಕಿನ ಹಾಗಲವಾಡಿ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರ ಪ್ರತಿಕೃತಿ ದಹಿಸಿ ಶಾಸಕರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ಶ್ರೀನಿವಾಸ್​​ರನ್ನು ವ್ಯವಸ್ಥಿತವಾಗಿ ಕುಮಾರಸ್ವಾಮಿ ತೇಜೋವಧೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ವಾಯವ್ಯ ಶಿಕ್ಷಕ ಕ್ಷೇತ್ರ: ತ್ರಿಕೋನ ಸ್ಪರ್ಧೆಗೆ ವೇದಿಕೆಯಾದ ಚುನಾವಣಾ ಕಣ

For All Latest Updates

ABOUT THE AUTHOR

...view details