ತುಮಕೂರು: ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಪಟ್ಟಂತೆ ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಮೊದಲ ದಿನ 164 ನಾಮಪತ್ರಗಳು ಸಲ್ಲಿಕೆಯಾಗಿವೆ.
ತುಮಕೂರು ಜಿಲ್ಲೆಯಲ್ಲಿ ಮೊದಲ ದಿನ ಕೇವಲ 164 ನಾಮಪತ್ರ ಸಲ್ಲಿಕೆ ಮೊದಲ ಹಂತದಲ್ಲಿ ನಡೆಯಲಿರುವ ಚುನಾವಣೆಗೆ ತುಮಕೂರು ತಾಲೂಕಿನಲ್ಲಿ 41 ಗ್ರಾಮ ಪಂಚಾಯತ್ಗಳಿಗೆ 26 ನಾಮಪತ್ರಗಳು ಸಲ್ಲಿಕೆಯಾಗಿವೆ. ಗುಬ್ಬಿ ತಾಲೂಕಿನ 34 ಗ್ರಾ.ಪಂ.ಗಳಿಗೆ-18, ಕುಣಿಗಲ್ ತಾಲೂಕಿನ- 36 ಗ್ರಾಮ ಪಂಚಾಯತ್ಗಳಿಗೆ 64, ಕೊರಟಗೆರೆ ತಾಲೂಕಿನ 24 ಗ್ರಾಮ ಪಂಚಾಯತ್ಗಳಿಗೆ 53, ಪಾವಗಡ ತಾಲೂಕಿನ 33 ಗ್ರಾಮ ಪಂಚಾಯತ್ಗಳಿಗೆ 3 ನಾಮಪತ್ರಗಳು ಸಲ್ಲಿಕೆಯಾಗಿವೆ.
ಡಿ. 7ರಿಂದ 11ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಡಿ.12ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಐದು ತಾಲೂಕುಗಳ 168 ಗ್ರಾಮ ಪಂಚಾಯತ್ಗಳಲ್ಲಿ 2786 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಉಳಿದ 2636 ಗ್ರಾಮ ಪಂಚಾಯತ್ಗಳಿಗೆ ನಾಮಪತ್ರ ಸಲ್ಲಿಕೆಯಾಗಿಲ್ಲ.
ಇದನ್ನು ಓದಿ:ಜೈಲಿಂದ ಅವಧಿಗೂ ಮುನ್ನ ಬಿಡುಗಡೆ ಕೋರಿದ ಶಶಿಕಲಾಗೆ ನಿರಾಶೆ
ನಾಮಪತ್ರಗಳನ್ನು ಹಿಂಪಡೆಯಲು ಡಿಸೆಂಬರ್ 14 ಕೊನೆಯ ದಿನವಾಗಿದ್ದು, ಡಿ.22ರಂದು ಮತದಾನ ನಡೆಯಲಿದೆ. ಡಿ.30ರಂದು ಆಯಾ ತಾಲೂಕಿನ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.